ಬೆಂಗಳೂರು: ನಟ ದರ್ಶನ್‌ ಅಭಿಮಾನಿಗಳು ಸ್ಯಾಂಡಲ್‌ವುಡ್‌ ನಟಿ ರಮ್ಯಾಗೆ ಅಶ್ಲೀಲ ಮೆಸೆಜ್‌ ಮಾಡಿರುವ ಕಾರಣ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದರು.ಈ ವಿಷಯಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಎ1 ಆರೋಪಿಯು ಬೆಂಗಳೂರಿನ ಕೆ.ಆರ್.ಪುರದ ಮೂಲವರಾದ ಪ್ರಮೋದ್‌  ಗೌಡ ಎಂಬುವವರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪ್ರಮೋದ್‌ ಗೌಡ ತನ್ನ ಗೆಳೆಯನ ಮೊಬೈಲಿನಲ್ಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ಕ್ರಿಯೆಟ್‌ ಮಾಡಿ ಅಶ್ಲೀಲ ಕಮೆಂಟ್‌ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.ನಂತರ ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಮಾಡಲಿದ್ದಾರೆ.

Leave a Reply

Your email address will not be published. Required fields are marked *