ಬೆಂಗಳೂರು: ಬೆಂಗಳೂರು ಜಿಲ್ಲೆಯ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿರುವ ಕಾರಣ ಅಕ್ರಮ ಮನೆಗಳ ತೆರವು ಕಾರ್ಯಾಚರನೆ ನಡೆಸಿರುವುದರಿಂದ ವಸತಿಯನ್ನು ಕಳೆದುಕೊಂಡಿರುವ ಜನರು ನಿರ್ಗರಿತರಾಗಿದ್ದಾರೆ.

ವಸತಿಗಳನ್ನು ತೆರವುಗೊಳಿಸಿರುವ ಘಟನೆಗೆಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕಮಿಷನರ್ ಹಾಗೂ ಸೆಕ್ರೆಟರಿಯವರೊಂದಿಗೆ ಚರ್ಚೆಯನ್ನು ನಡೆಸಿ, ತೆರವುಗೊಳಿಸಿರುವ ನಿವಸಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಮನೆಗಳನ್ನು ತೆರವುಗೊಳಿಸಿರುವ ನಿರ್ಗತಿಕರು ಬೇರೆ ಬೇರೆ ಕಡೆಯಿಂದ ವಲಸೆ ಬಂದಿರುವವರಾಗಿದ್ದಾರೆ.ನಾವು ಮನುಷ್ಯತ್ವ, ಮಾನವೀಯತೆಯಿಂದ ಅವರಿಗೆ ಪರ್ಯಾಯವಾಗಿ ವಸತಿಯನ್ನು ಕಲ್ಪಿಸಿಕೊಡುವಂತೆ ಇದಕ್ಕೆ ಸಂಬಂಧಿಸಿರುವ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
