ಕಲಬುರ್ಗಿ: ದಲಿತ ಒಳಮೀಸಲಾತಿಯನ್ನು ರಾಜ್ಯಪಾಲರು ಹಿಂದಿರುಗಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿಯ ವಿಚಾರವಾಗಿ ಏನಾದ್ರೂ ಸ್ಪಷ್ಟನೆ ಕೇಳಿದ್ದರೆ ನೀಡುತ್ತಿದ್ದೇವು.ಉದ್ದೇಶಪೂರ್ವಕವಾಗಿ ತಿರಸ್ಕರಿಸಿದರೆ ಏನು ಅರ್ಥ. ಸದನದಲ್ಲಿ ಒಳಮೀಸಲಾತಿ ಮಸೂದೆ ಮಂಡನೆಯ ವೇಳೆ ಬಿಜೆಪಿ ಮೌನವಾಗಿತ್ತು.ಆದರೀಗ ಅದೇ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.ಮೀಸಲಾತಿ ಮಸೂದೆಯನ್ನು ಮುಗಿಸುವುದೇ ಬಿಜೆಪಿಯ ಕಾರ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ದ್ವೇಷ-ಭಾಷಣದ ಮಸೂದೆಯಲ್ಲು ಕೂಡ ರಾಜ್ಯಪಾಲರು ಬಿಜೆಪಿಯವರ ಮಾತು ಕೇಳಿ ಪೆಂಡಿಂಗ್ ಇಡುವ ಹಾಗೆ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
