ಬೆಂಗಳೂರು: ಬಳ್ಳಾರಿ ಗಲಾಟೆಯಲ್ಲಿ ಗುಂಡಿನ ದಾಳಿ ನಡೆದು ಕಾಂಗ್ರೆಸ್‌ ಶಾಸಕ ಮೃತಪಟ್ಟಿದ್ದಾನೆ.ಈ ಪ್ರಕರಣದ ಕುರಿತು ತನಿಖೆಯಾಗ್ತಿದೆ.ಯಾರು ತಪ್ಪಿತಸ್ಥರಾಗಿದ್ದಾರೋ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಘಟನೆಗೆ ಸಿಎಂ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು, ಇಷ್ಟೊಂದು ದೊಡ್ಡ ಗಲಾಟೆ ಯಾಕಾಯ್ತು ಎಂದು ನಮ್ಮ ಮೇಲೆ ಕೋಪಮಾಡಿಕೊಂಡಿದ್ದಾರೆ.ಈ ರೀತಿಯ ಘಟನೆ ನಡೆಯಬಾರದಿತ್ತು.ಬ್ಯಾನರ್‌ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿರುವುದು ಎಂದು ಎಲ್ಲರಿಗು ತಿಳಿದಿದೆ.ಗುಂಡಿನ ದಾಳಿಯಿಂದ ಕಾಂಗ್ರೆಸ್‌ ಕಾರ್ಯಕರ್ತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *