ಬೆಂಗಳೂರು: ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ವ್ಯಕ್ತಿಯ ಬಾಡಿಯನ್ನು 2 ಬಾರಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ನಿಮಗೆ ಯಾರು ಪರ್ಮಿಷನ್ ನೀಡಿದರು?ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜೆಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆದಿರುವಂತಹ ಘಟನೆಯು ಫ್ರೀ ಪ್ಲಾನ್ ಆಗಿದ್ದು, ಮೃತಪಟ್ಟ ಶವವನ್ನು ಎರಡೆರಡು ಬಾರಿ ಮಾಡಿಸಲಾಗಿದೆ. ಶವಪರೀಕ್ಷೆಯನ್ನು ಎರಡೆರು ಬಾರಿ ಮಾಡಲು ಯಾರು ಅನುಮತಿ ಕೊಟ್ಟಿದ್ದಾರೆ.ಯಾವ ಮತ್ತು ಯಾರ ಒತ್ತಡಕ್ಕೆ 2ನೇ ಬಾರಿ ಶವಪರೀಕ್ಷೆ ಮಾಡಿದ್ದಾರೆ? ಈ ಪ್ರಕರಣದ ತನಿಖೆಯ ಬಗ್ಗೆ ಅನುಮಾನವಿದ್ದು, ಈ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಆಗ್ರಹ ಮಾಡಿದ್ದಾರೆ.
ಜನಾರ್ಧನ ರೆಡ್ಡಿ ಮೇಲೆ ಆರೋಪ ಹೊರಿಸಲೇಂದೇ 2ನೇ ಬಾರಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯನ ಆಡಳಿತಾವಧಿಯಲ್ಲಿ ಜನಗಳಿಗೆ ರಕ್ಷಣೆಯಿಲ್ಲ.ಬಳ್ಳಾರಿ ಜಿಲ್ಲೆಯಲ್ಲಿ ಗಲಭೆ ನಡೆದಿದ್ದರೂ ಕೂಡಾ ಸರ್ಕಾರ ಕ್ರಮವನ್ನು ಕೈಗೊಂಡಿಲ್ಲ.ರಾಜ್ಯದಲ್ಲಿ ಈ ಸರ್ಕಾರ ಬದುಕಿದೆಯಾ? ಸತ್ತು ಹೋಗಿದೆಯಾ? ಎಂದು ಗುಡುಗಿದ್ದಾರೆ.
