ಮೈಸೂರು: ಬಳ್ಳಾರಿ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಗೆ ಒಪ್ಪಿಸುವುದಕ್ಕೆ, ನ್ಯಾಯಾಂಗ ತನಿಖೆಗೆ ನೀಡುವುದರ ಕುರಿತು ನಾಳೆ ತೀರ್ಮಾನಿಸಲಾಗ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಅವರು, ಪೊಲೀಸರ ಕಾರ್ಯದ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ. ಕಂಪ್ಲೀಟ್ ವರದಿ ಬಂದ ನಂತರ ಮಾತನಾಡುತ್ತೇನೆ.ನ್ಯಾಯಾಧೀಶರಿಂದ ತನುಖೆಯಾಗಬೇಕೆಂದು ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಇದರ ಬಗ್ಗೆ ಗೃಹಮಂತ್ರಿ ಜಿ.ಪರಮೇಶ್ವರ್ ಜೊತೆ ಮಾತನಾಡುತ್ತೇನೆ. ನಂತರ ನ್ಯಾಯಾಂಗ ತನಿಖೆಗೆ ನೀಡುವ ಕುರಿತು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಪೋಸ್ಟ ಮಾರ್ಟಮ್ 2ಬಾರಿ ಮಾಡಿರುವುದು ಏಕೆ ? ಎಂದು ಸಚಿವ ಕುಮಾರಸ್ವಾಮಿಯವರು ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಈ ವಿಚಾರ ಗೊತ್ತಿಲ್ಲ.ದನ್ನು ಪೊಲೀಸರು ನೋಡಿಕೊಳ್ತಾರೆ, ನಮ್ಮ ಪೊಲೀಸರ ಕಾರ್ಯದಕ್ಷತೆಯ ಮೇಲೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
