ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್‘ ಚಿತ್ರದ ಟೀಸರ್ ಬಿಡುಗಡೆಯಾದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಕುಟುಂಬ ಸಮೇತ ಸಿನಿಮಾ ನೋಡುವ ಪ್ರೇಕ್ಷಕರು ಈ ಟೀಸರ್ ಅನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬ ಸಂಶಯ ಮೂಡಿದೆ.
‘ಟಾಕ್ಸಿಕ್’ ಎಂಬ ಹೆಸರೇ ಸ್ವಲ್ಪ ಮಟ್ಟಿಗೆ ನೆಗೆಟಿವ್ ಎನಿಸಿದರೂ, ಟೀಸರ್‌ನಲ್ಲಿ ಬಳಕೆಯಾದ ಸಂಗೀತ ಮತ್ತು ಯಶ್ ಅವರ ಸ್ಟೈಲಿಶ್ ಲುಕ್ ಕುಟುಂಬದ ಯುವ ಸದಸ್ಯರನ್ನು ಸೆಳೆದಿದೆ. ಹಳೆಯ ಕಾಲದ ‘ಗೀತಾಯನ’ ಶೈಲಿಯ ಮ್ಯೂಸಿಕ್ ಹಿರಿಯ ಪ್ರೇಕ್ಷಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಫ್ಯಾಮಿಲಿ ಆಡಿಯನ್ಸ್‌ಗೆ ಯಶ್ ಎಂದರೆ ‘ರಾಕಿ ಭಾಯ್’ ಎಂಬ ಫಿಕ್ಸ್ಡ್ ಇಮೇಜ್ ಇತ್ತು. ಆದರೆ ಈ ಟೀಸರ್‌ನಲ್ಲಿ ಯಶ್ ಸಂಪೂರ್ಣವಾಗಿ ಭಿನ್ನವಾದ, ಸ್ವಲ್ಪ ವಿಲಕ್ಷಣವಾದ ಅವತಾರದಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಹೊಸತನದ ಭರವಸೆ ನೀಡಿದೆ. ಇದು ಬರಿ ಹೊಡೆದಾಟದ ಸಿನಿಮಾವಲ್ಲ, ಬದಲಿಗೆ ಏನೋ ಒಂದು ವಿಭಿನ್ನ ಕಥೆ ಇದೆ ಎಂಬ ನಿರೀಕ್ಷೆ ಮೂಡಿಸಿದೆ.
ಟೀಸರ್‌ನಲ್ಲಿ ಗನ್, ಸಿಗಾರ್ ಮತ್ತು ಡಾರ್ಕ್ ಥೀಮ್ ಇರುವುದರಿಂದ, ಇದು ಕೇವಲ ಸಾಹಸ ಪ್ರಧಾನ ಸಿನಿಮಾವಾಗಿರಬಹುದು ಎಂಬ ಅಭಿಪ್ರಾಯ ಕೆಲವು ಕುಟುಂಬಗಳಲ್ಲಿ ಮೂಡಿದೆ. ಸಣ್ಣ ಮಕ್ಕಳಿರುವ ಕುಟುಂಬಗಳು ಈ ‘ಟಾಕ್ಸಿಕ್’ ವರ್ತನೆ ಅಥವಾ ಅತಿರೇಕದ ಹಿಂಸೆ ಸಿನಿಮಾದಲ್ಲಿ ಇರುತ್ತದೆಯೇ ಎಂಬ ಯೋಚನೆ ಮೂಡಿದೆ.

ಗೀತು ಮೋಹನ್ ದಾಸ್ ಅವರು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯಾಗಿರುವುದರಿಂದ, ಅವರು ಕೇವಲ ಆಕ್ಷನ್‌ಗೆ ಒತ್ತು ನೀಡದೆ, ಕಥೆಯಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಜಾಗ ನೀಡಿರುತ್ತಾರೆ ಎಂಬ ನಂಬಿಕೆ ಕುಟುಂಬ ವರ್ಗದವರಲ್ಲಿದೆ. ಸಾಮಾನ್ಯವಾಗಿ ಮಹಿಳಾ ನಿರ್ದೇಶಕರು ಪಾತ್ರಗಳ ಸಂವೇದನೆಯನ್ನು ಚೆನ್ನಾಗಿ ತೋರಿಸುತ್ತಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.
ಟೀಸರ್ ನೋಡಿದ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ವಿಭಿನ್ನ ಸ್ಟೈಲನ್ನು ಸ್ವೀಕರಿಸಿದರೆ, ಮತ್ತೆ ಕೆಲವರು ಅಯ್ಯೋ ಇದನ್ನು ಫ್ಯಾಮಿಲಿ ಜೊತೆ ಕುಳಿತು ನೋಡುವುದಕ್ಕೆ ಮುಜುಗರವಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ರಾಕಿಂಗ್‌ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾಗೆ ಆಲ್ ದ ಬೆಸ್ಟ್ ಹೇಳುತ್ತಾ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ನೀಡಲಿ ಎಂದು ಆಶಿಸೋಣ.
