ಬಿಗ್​​ ಬಾಸ್ ಮನೆಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನಿನ್ನೆ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆಯನ್ನು ನೀಡಿದ್ದಾರೆ. ನಿಮ್ಮ ಆಪೋಸಿಟ್‌ ಸ್ಪರ್ಧಿಗಳಿಗೆ ಏನಾದರೂ ಡೈರೆಕ್ಟ್‌ ಆಗಿ ಹೇಳಬೇಕು ಅಂದುಕೊಂಡಿದ್ದರೆ,ಅವರ ಮುಖಕ್ಕೆ ಹೊಡೆದಂಗೆ ಹೇಳೊದು ಅಂತಾ ಹೇಳ್ತಾರಲ್ಲ ಹಾಗೆ ಹೇಳಬೇಕು ಎನ್ನುವ ಟಾಸ್ಕನ್ನು ನೀಡುತ್ತಾರೆ. ಗೋಡೆಯ ಮೇಲೆ ನೇತು ಹಾಕಿರುವ ಪೋಟೊಗೆ ಪಂಚ್ ಮಾಡುವ ಮೂಲಕ  ಹೇಳಿ ಎಂದು ಸೂಚಿಸಿದ್ದರು. ಆ ಸಮಯದಲ್ಲಿ ಅಶ್ವಿನಿ ಗೌಡರವರು, ರಾಶಿಕಾ ಪೋಟೋಗೆ ಪಂಚ್‌ ಮಾಡಿದ ನಂತರ ಮುಖಕ್ಕೆ ಗೊಡೆದಂತ  ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ.

ಅಶ್ವಿನಿ ಗೌಡ, ರಾಶಿಕಾಗೆ ಹೀಗೆ ಹೇಳಿದ್ರು..?

ಬಿಗ್ ಬಾಸ್ ಸೀಸನ್ 12ರಲ್ಲಿ, ನಾನು ಮಿಸ್ ಯುನಿವರ್ಸ್ ಅಂದ್ಕೊಂಡಿರೋ ರಾಶಿ. ನಿನ್ನ ವಯಸ್ಸಿಗೂ, ನನ್ನ ವಯಸ್ಸಿಗೂ ತುಂಬಾನೇ ಅಂತರವಿದೆ. ನಿನ್ನನ್ನ ನೀನೇ ಹೇಳಿಕೊಳ್ತಿದ್ದೆ. ಬಿಗ್‌ಬಾಸ್‌ ಮನೆಯಲ್ಲಿ ರೋ ಎಲ್ಲಾ ಹೆಣ್ಣು ಕ್ಕಳಿಗಿಂತ ತುಂಬಾನೇ ಸ್ಟ್ರಾಂಗು ಎಂದು. ಅದರೆ, ಹಿಂದಿನ ಆಟದಲ್ಲಿ ನಿನಗಿಂತ ನಾನು ಹೆಚ್ಚು ಸ್ಟ್ರಾಂಗ್ ಎಂದು ಪ್ರೂವ್ ಮಾಡಿ ತೋರಿಸಿದ್ದೀನಿ. 

ನಿನ್ನ ರೀತಿ, ಬಿಗ್ ಬಾಸ್ ಮನೆಯೊಳಗೆ ಇನ್ನೊಂದು ಟ್ರ್ಯಾಕು, ಆಚೆ ಮತ್ತೊಂದು ಟ್ರ್ಯಾಕು ಎಂದು ನಾನು ಶುರು ಮಾಡಿರಲಿಲ್ಲ. ನಿನಗೆ ನಿಯತ್ತು ಅನ್ನೋದೆ ಇಲ್ಲ ಅನ್ನೋದಕ್ಕೆ ಸೂರಜ್ ದೊಡ್ಡ ಉದಾಹರಣೆ. ಗಿಲ್ಲಿಗೆ ನಾನು ರಿಕ್ವೆಸ್ಟ್ ಮಾಡಿಕೊಂಡೆ. ಹೌದು, ನಾನು ರಿಕ್ವೆಸ್ಟ್ ಮಾಡಿಕೊಂಡೆ.. ಮಾಡಲ್ಲ ಎಂಬ ಪದವನ್ನು ನಾನು ಉಪಯೋಗ ಮಾಡಿಲ್ಲ. ಏಕವಚನ ಪದವನ್ನು ಬಳಸಿದ್ದು ಗಿಲ್ಲಿನೇ. 

ಬಿಗ್‌ಬಾಸ್‌ ಮನೆಯಲ್ಲಿ ಕೊನೆಯ ಕ್ಯಾಪ್ಟನ್ಟಿ ಟಾಸ್ಕ್‌ನಲ್ಲಿ ಗೆದ್ದವರು ನೇರವಾಗಿ ಫಿನಾಲೆ ಗೆ ತಲುಪುತ್ತಾರೆ ಎನ್ನುವ ಅಪಾರ್ಚುನಿಟಿಯಿತ್ತು.ಆದರೆ ಟಾಸ್ಕ್‌  ನಡೆಯುವ ಟೈಮಿನಲ್ಲಿ ನೀನು ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇ, ನೀನು ನಿನ್ನ ಕೆಲಸವನ್ನು ಚೆನ್ನಾಗಿ ಮಾಡಿದ್ದರೆ ನಾನುಮನೆಯ ಲಾಸ್ಟ್‌ ಕ್ಯಾಪ್ಟನ್‌ ಆಗಿರುತ್ತಿದ್ದೇ ಎಂದು ಕಿಡಿಕಾರಿದ್ದಾರೆ.

ನಿನಗೆ ಒರಗಿಕೊಳ್ಳೋಕೆ ರಘುವರ ತೊಡೆ ಬೇಕು. ನಿನಗೆ ಒರಗಿ ಕೊಳ್ಳೋಕೆ ರಘು ಅವರ ಹೆಗಲು ಬೇಕು. ನನಗೆ ಯಾವುದರ ಅವಶ್ಯಕತೆಯು ಇಲ್ಲ. ನಾನು ಇನ್ನೊಬ್ಬರಿಗೆ ಹೆಗಲಾಗಿ ಇರ್ತೀನಿ ಇದು ನಿನಗೆ ಅರ್ಥ ಆಯ್ತಾ. ಯೂ ಆರ್ ನಥಿಂಗ್ ಇನ್ ಫ್ರಂಟ್ ಆಫ್ ಮೀ ಎಂದು ಅಶ್ವಿನಿ ಗೌಡ ರಾಶಿಕಾಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಅಶ್ವಿನಿಗೌಡರವರ ಕಟು ಮಾತುಗಳಿಂದ ರಾಶಿಖಾ ಶೆಟ್ಟಿಯ ಅಭಿಮಾನಿಗಳಿಗೆ ಬೇಸರ ತಂದಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದ್ದು, ಅಶ್ವಿನಿ ಗೌಡರ ಬಗ್ಗೆ ಅಸಮಾದಾನ ವ್ಯಕ್ತಪಡಿಸಿಸುತ್ತಿದ್ದಾರೆ.

Leave a Reply

Your email address will not be published. Required fields are marked *