ದಾವಣಗೆರೆ: ಬಿಜೆಪಿ ನಾಯಕರೇ ರಾಜ್ಯ ಸರ್ಕಾರದ ಜಪ ಮಾಡುವುದನ್ನು ಬಿಟ್ಟು ರೈಲು ಪ್ರಯಾಣಿಕರ ಕಷ್ಟಗಳನ್ನು ಆಲಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರವನ್ನು ಸದಾ ಟೀಕಿಸುವ ಬಿಜೆಪಿ ಸರ್ಕಾರವು ರೈಲ್ವೆ ಪ್ರಯಾಣ ಟಿಕೆಟ್ ದರವನ್ನು ಹೆಚ್ಚು ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಪ್ರಶ್ನೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಮುಖಂಡರಿಗೆ ಸಲಹೆಯನ್ನು ನೀಡಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪರವರ ನುಡಿನಮನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಸುದ್ದಿಗಾರೊಂದಿಗೆ ಮಾತನಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ದ ಮಾತನಾಡಲು ಏನಾದರೂ ಟಾಪಿಕ್ ಇದೆಯಾ ಎಂದು ರಾಜ್ಯ ಸರ್ಕಾರದ ವಿರುದ್ದ ಮಾತ್ರ ಮಾತನಾಡುವ ಬಿಜೆಪಿಯನಾಯಕರು ರೈಲ್ವೆ ಪ್ರಯಾಣದ ರೇಟ್ ಹೆಚ್ಚಾಗಿ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ.ಈ ರೈಲ್ವೆ ದರ ಏರಿಕೆಯ ಬಗ್ಗೆ ಮಾತನಾಡದೆ ಕೇವಲ ರಾಜ್ಯ ಸರ್ಕಾರದ ವಿರುದ್ಧ ಮಾತ್ರ ಪ್ರಶ್ನೆ ಮಾಡುವ ಬಿಜೆಪಿ ನಾಯಕರು ಈ ವಿಚಾರದ ಬಗ್ಗೆಯೂ ಪ್ರಶ್ನೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
