ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ “ದಿ ಡೆವಿಲ್” ಎಂದರೆ ತಪ್ಪಾಗಲಾರದು ಅಭಿಮಾನಿಗಳ ಅರಾಧ್ಯ ದೈವರಾದ ದರ್ಶನ್ ನಟನೆಯ ಸಿನಿಮಾ ನೋಡಲು ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಡೆವಿಲ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಅದರಲ್ಲಿರುವ ಡೈಲಾಗ್ ಹೀಗಿದೆ: ಸೂರ್ಯನಿಗೆ ಗ್ರಹಣವಿಡಿದರೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ, ನಾನು ಬರ್ತಿದ್ದೀನಿ ಚಿನ್ನ” ಎಂಬ ಡೈಲಾಗ್ ಹೇಳುವುದರ ಮೂಲಕ ದಾಸ ದರ್ಶನ್ ಅಭಿಮಾನಿಗಳಿಗೆ ಭರವಸೆಯನ್ನು ನೀಡಿದ್ದಾರೆ.ಅದೇ ರೀತಿ ಇದೇ ತಿಂಗಳ: ಅಂದರೆ ಡಿಸೆಂಬರ್ 11ನೇ ತಾರೀಖಿನಂದ ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿದುಬಂದಿದೆ.

ಡೆವಿಲ್ ಸಿನಿಮಾದ ಟ್ರೈಲರ್ನಲ್ಲಿ ದರ್ಶನ್ ಸ್ಟೈಲೀಶ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಝಲಕ್ ನೋಡಬಹುದು.ಈ ಸಿನಿಮಾವನ್ನು ಮಿಲನಾ ಪ್ರಕಾಶ್ ನಿರ್ದೇಶಿಸಿದ್ದು ಈ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಬಿಗ್ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದ ಗಿಲ್ಲಿ ನಟ ಡೆವಿಲ್ ಚಿತ್ರದಲ್ಲಿ ನಟನೆ ಮಾಡಿದ್ದು ಟ್ರೈಲರ್ನಲ್ಲಿಯೂ ಕೂಡಾ ಕಾಣಿಸಿಕೊಂಡಿರುವ ಗಿಲ್ಲಿ ನಟ ಡಿಫ್ರೆಂಟ್ ಲುಕ್ಕಿನಲ್ಲಿ ಪೊಲೀಸ್ ಠಾಣೆಗೆ ಎಂಟ್ರಿಯಾಗಿ ಪೊಲೀಸರೆದುರು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡು “ ಎಕ್ಸ್ಕ್ಯೂಸ್ ಮೀ ಪಿಸಿ, ಚೂರು ಎಸಿ ಹಾಕಮ್ಮ… ಲಾಟ್ ಆಫ್ ಸೆಕೆ ಎಂದು ಡೈಲಾಗ್ ಹಾಕಿದ್ದಾರೆ.

ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸಿನಿಮಾದ ಮೇಲಿನ ಎಕ್ಸ್ಪೆಕ್ಟ್ಟೇಷನ್ ಹೆಚ್ಚಾಗಿದೆ.ಡಿಸೆಂಬರ್11ರ ಮುಂಜಾನೆ 630ಕ್ಕೆ ಸಿನಿಮಾ ಪ್ರದರ್ಶನ ಪ್ರಾರಂಭವಾಗಲಿದೆ. ಆದ್ದರಿಂದ ಬುಕ್ ಮೈ ಶೋನಲ್ಲಿ ನಾಳೆಯಿಂದಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ ಎನ್ನಲಾಗಿದೆ.
