ಬಿಗ್‌ಬಾಸ್‌ ಮನೆಗೆ ಒಂಟಿಯಾಗಿ ಬಂದು ಜಂಟಿಯಾಗಿ ಮೆರೆದ ಅಶ್ವಿನಿಗೌಡ ಮತ್ತು ಜಾಹ್ನವಿಯವರ ನಡುವೆ ಬಿರುಕು ಮೂಡಿದ್ದು ಅದಕ್ಕೆ ಕಾರಣವನ್ನು ಅಶ್ವಿನಿಗೌಡ ರಾಶಿಕಾ ಎದುರು ವಿವರಿಸಿದ್ದಾರೆ.

ದೊಡ್ಮನೆಯಲ್ಲಿ ಕುಚುಕು ಗೆಲೆಯರಂತಿದ್ದ ಯಾರೂ ಬೇರೆ ಮಾಡಲು ಸಾದ್ಯವಿಲ್ಲವೆಂದುಕೊಂಡಿದ್ದ ಅಶ್ವಿನಿಗೌಡ ಮತು ಜಾಹ್ನವಿ ನಡುವೆ ಫೈಟ್‌ ಶುರುವಾಗಿದೆ.ಇವತಿನ ಸಂಚಿಕೆ ಇವರಿಬ್ರ ಜಗಳದ್ದೇ ವಿಷಯವಾಗಿರುತ್ತದೆ ಎಂದು ಹೇಳಲಾಗಿದೆ.

ನಿಮ್ಮದು ಮತ್ತು ಜಾಹ್ನವಿಯವರದ್ದು ಎಂತಾ ಸ್ನೇಹ ಹೀಗೆ ಯಾಕಾಯಿತು . ನಿವಿಬ್ರೂ ಕೂತು ಸಮಸ್ಯೆಯನ್ನು ಭಿನ್ನಾಭಿಪ್ರಾಯವನ್ನು ಬಗೆಹರಿಸಬಹುದಿತ್ತಲ್ವ ಎಂದು ಮಾತಿಗೆ ಎಳೆಯುವುದರ ಮೂಲಕ ರಾಶಿಕಾಶೆಟ್ಟಿ ಅಶ್ವಿನಿ ಗೌಡರವರ ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ಮಾಡಿದ್ದಾರೆ.

ರಾಶಿಕಾ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿಗೌಡ ಅವರಿಗೆ ನಾನು ತುಂಬಾ ಸಲ ತಿಳಿಸಲು ಪ್ರಯತ್ನಿಸಿದ್ದೇನೆ.ಆದರೆ ಅವರು ಕೇಳುವ ಪರಿಸ್ಥಿತಿಯಲ್ಲಿಲ್ಲ. ಬನ್ನಿ ಹೊರಗಡೆ ಮಾತನಾಡಿ. ನಿಮ್ಮ ಅಭಿಪ್ರಾಯ ತಿಳಿಸಿ ಸ್ಟಾಂಡ್‌ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ ಆದರೆ ಅವರು ಬದಲಾಗಲೇಯಿಲ್ಲ.

ಜಾಹ್ನವಿಗಾಗಿಯೇ ನಾನು ಮಾತನಾಡಿ ಮಾತನಾಡಿ, ಎಲ್ಲರ ಹತ್ತಿರವೂ ದುಷ್ಮನ್‌ ಆಗಿದ್ದೇನೆ. ನೀನು ಮುಂದೆ ಹೋಗಿ ನಿನ್ನ ಹಳ್ಳವನ್ನು ನೀನು ತೋಡಿಕೋ,ನಿನ್ನನ್ನು ನಿಧಾನವಾಗಿ ಮನೆಯಿಂದ ಹೊರಹಾಕಿ ನಾವು ರೇಸಿನಲ್ಲಿ ನಿಧಾನಕ್ಕೆ ಬರುತೇನೆ ಎಂಬುದು ಆಮೆ-ಮೊಲ ಕತೆ ಹೇಳಿದ್ದಾರೆ.ನನಗೆ ಆಗ ಜ್ಞಾನೋದಯವಾಯಿತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *