ರಾಹುಲ್‌ ಗಾಂಧಿಯವರ ಎದೆಗೆ ಗುಂಡಿಕ್ಕಿ ಹೊಡೆಯುತ್ತೇವೆ ಎಂದುಕೇರಳ ಬಿಜೆಪಿ ನಾಯಕ ಕೊಲೆ ಬೆದರಿಕೆಯ ವಿರುದ್ದ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್‌ ಸರ್ಕಾರ ಆದೇಶಿಸಿದೆ.

ರಾಹುಲ್‌ ಎದೆಗೆ ಗುಂಡು ಹೊಡೆಯುತ್ತೇವೆ ಎಂಬ ಹೇಳಿಕೆಯನ್ನು ಕೇರಳ ವಕ್ತಾರ ಪಿಂಕು ಮಹಾದೇವ್‌ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಗೃಹಸಚಿವ ಅಮಿತ್‌ ಶಾರವರಿಗೆ ಪತ್ರವನ್ನು ಬರೆಯಲಾಗಿದೆ.

ಈ ರೀತಿ ನೇರವಾಗಿ ಹೇಳಿಕೆ ನೀಡುವುದು ಸರಿಯಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುವ ರಾಹುಲ್‌ ಗಾಂಧಿಗೆ ಹಾಕಿರುವ ಬೆದರಿಕೆ ಅತಿಶಯೋಕ್ತಿ. ಇದು ಸಂವಿಧಾನದ ಮೇಲೆ ಮಾಡಿರುವ ದಾಳಿಯಾಗಿದೆ.ರಾಹುಲ್‌ ಗಾಂಧಿಯವರಿಗೆ ಕೊಲೆ ಬೆದರಿಕೆಗಳು ಇದೇನು ಹೊಸದಲ್ಲ, ಬಿಜೆಪಿಯು ಉದ್ದೇಶಪೂರ್ವಕವಾಗಿ ಮಾಡುತ್ತಿದೆಯೇ ಎಂಬ ಸಂಶಯ ಮೂಡುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

ಇದೆಲ್ಲ ಬಿಜೆಪಿಯ ಪಿತೂರಿಯೇ? ಈ ಪಕ್ಷವೂ ಕೊಲೆ ಬೆದರಿಕೆಗಳ ಪರವಾಗಿದೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ. ವಿರೋಧ ಪಕ್ಷದ ನಾಯಕರ ವಿರುದ್ದ ಕತ್ತಿ ಮಸೆಯುವುದನ್ನು ಬಿಟ್ಟು ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಬಿಜೆಪಿಯನ್ನು ಒತ್ತಾಯಿಸಿದೆ.

Leave a Reply

Your email address will not be published. Required fields are marked *