ದೆಹಲಿ ಹೈಕೋರ್ಟಿಗೆ ಬಾಂಬ್‌ ಬೆದರಿಕೆ ಬಂದಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ವಕೀಲರು, ನ್ಯಾಯಾಧೀಶರು, ದಾವೆ ಹೂಡವವರು ಹಾಗೂ ಸಿಬ್ಬಂದಿ ವರ್ಗದವರನ್ನೆಲ್ಲಾ ಕೋರ್ಟಿನ ಆವರಣದಿಂದ ಸ್ಥಳಾಂತರಿಸಲಾಗಿದೆ  ಎಂದು ತಿಳಿದುಬಂದಿದೆ.

ದೆಹಲಿಯ ಪೊಲೀಸ್‌ನವರ ಮಾಹಿತಿ ಪ್ರಕಾರ, ಕೋರ್ಟಿನ ಆವರಣದಲ್ಲಿ 3 ಬಾಂಬ್‌ಗಳನ್ನು ಇರಿಸಲಾಗಿದ್ದು, ಇಂದು ಮಧ್ಯಾಹ್ನ ಸುಮಾರು 2 ಗಂಟೆಯೊಳಗಾಗಿ ಬಾಂಬ್‌ ಸ್ಪೋಟಗೊಳ್ಳುತ್ತದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಸಂದೇಶವನ್ನು ರವಾನಿಸಿದ್ದಾರೆ. ಈ ಸಂದೇಶದಲ್ಲಿ ನಿಖರವಾದ ಸ್ಥಳದ ಮಾಹಿತಿಯಿಲ್ಲ. ವಿಷಯ ತಿಳಿಯುತ್ತಿದ್ದಂತೆ ಬಾಂಬ್‌ ಪತ್ತೆದಾರಿಗಳು ಮತ್ತು ಬಾಂಬ್‌ ತೆಗೆಯುವ ವಿಲೇವಾರಿಗಳ ತಂಡವನ್ನು ಆಯೋಜಿಸಲಾಗಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *