ಲಂಡನ್: ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ʼದಿ ಹಂಡ್ರೆಡ್ ಲೀಗ್ʼ ಪಂದ್ಯದಲ್ಲಿ ಅದ್ಬುತವಾಗಿ ಬ್ಯಾಟಿಂಗ್ ಮಾಡಿ ಭಾರತದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವುದರ ಮೂಲಕ ಆಸ್ಟೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ.
ಇತ್ತೀಚೆಗೆ ಆಡಿರುವ ಆಟದಲ್ಲಿ ಡೆವಿಡ್ ವಾರ್ನರ್ 71 ರನ್ ಗಳಿಸುವುದರ ಮೂಲಕ ಟಿ20 ರನ್ನುಗಳ ಸಂಖ್ಯೆಯನ್ನು 13.545ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪರವಾಗಿ ಟಿ20 ಕ್ರಿಕೆಟಿನಲ್ಲಿ ಹೆಚ್ಚು ರನ್ನುಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ವಾರ್ನರ್.
ಐದನೇ ಸ್ಥಾನದಲ್ಲಿದ್ದ ವಿರಾಟ್ 397 ಪಂದ್ಯಗಳನ್ನು ಆಡಿ,13.543ರನ್ನುಗಳನ್ನು ಕಲೆಹಾಕಿದ್ದರು. ಆದರೀಗ ಡೆವಿಡ್ ವಾರ್ನರ್ ಕೇವಲ 2 ರನ್ನುಗಳಿಂದ ವಿರಾಟ್ರನ್ನು ಹಿಂದಿಕ್ಕಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಶೊಯೆಬ್ ಮಲಿಕ್ ದಾಖಲೆಯನ್ನು ಹಿಂದಿಕ್ಕುವುದು ಡೆವಿಡ್ ವಾರ್ನರ್ ಮುಂದಿನ ಗುರಿಯಾಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಹೆಚ್ಚು ರನ್ ಗಳಿಸಿರುವ ವಿಶ್ವ ದಾಖಲೆಯು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 455 ಪಂದ್ಯಗಳಿಂದ ಬರೋಬ್ಬರಿ 14.562 ರನ್ನುಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ.
