ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಆರೋಪಿ ಪವಿತ್ರಾಗೌಡಾಗೆ ರೇಣುಕಾಸ್ವಾಮಿ ಅಶ್ಲೀಲ ಪೋಟೋ ಕಳಿಸಿರುವುದ ನಿಜವಾಗಿದೆ ಎಂದು ಪೊಲೀಸರಿಗೆ ದೃಢವಾಗಿದೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿಯವರು ಬಳಸುತ್ತಿದ್ದ ಇನ್ಸ್ಟಾಗ್ರಾಂ ಖಾತೆಯಿಂದ ಬಂದಿದೆ ಎಂದು ಪೊಲೀಸರಿಗೆ ಖಾತರಿಯಾಗಿದೆ.
ಈ ಪ್ರಕರಣದ ವಿಚಾರದಲ್ಲಿ ನಾವೇ ಕೊಲೆ ಮಾಡಿರುವುದಾಗಿ ಹೇಳಿಕೊಂಡು ಬಂದ ನಿಖಿಲ್ ನಾಯ್ಕ್, ಕೇಶವಮೂರ್ತಿ, ಮತ್ತು ಕಾರ್ತಿಕ್ ಈ ಮೂರು ಜನಕ್ಕೂ ಈ ಕೊಲೆಯಲ್ಲಿ ಯಾವುದೇ ರೀತಿ ಪಾತ್ರವಿಲ್ಲವೆಂದು ತಿಳಿದುಬಂದಿದೆ, ಈ ಮೂವರು ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ್ದಾರೆಂದು ಇವರ ಹೆಸರನ್ನು ಚಾರ್ಜ್ಶೀಟಿನಲ್ಲಿ ಉಲ್ಲೇಖಿಸಲಾಗಿದೆ 4000ಕ್ಕಿಂತಲೂ ಹೆಚ್ಚಿರುವ ಚಾರ್ಜ್ಶೀಟನ್ನು ಇಂದು ಸಲ್ಲಿಸಲಾಗುತ್ತದೆ.