ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026) ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಪಾಳಯದಲ್ಲಿ ಈಗ ಭಾರಿ ಬಿರುಗಾಳಿ ಎದ್ದಿದೆ. ಕಳಪೆ ಪ್ರದರ್ಶನ ಹಾಗೂ ಆಟಗಾರರ ನಡುವಿನ ಭಿನ್ನಾಭಿಪ್ರಾಯದಿಂದ ಸುದ್ದಿಯಾಗಿದ್ದ ಮುಂಬೈ ಫ್ರಾಂಚೈಸಿಯಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಗೆ ಮುಹೂರ್ತ ಇಡಲಾಗಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದು ಮಾತ್ರವಲ್ಲದೆ, ಇಡೀ ಫ್ರಾಂಚೈಸಿಗೇ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ ಎಂಬ ಬಲವಾದ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.

ಹಾರ್ದಿಕ್ ಪಾಂಡ್ಯ ಮುಂಬೈ ಬಿಡಲು ಕಾರಣವೇನು?

ಐಪಿಎಲ್ 2026 ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ತೀರಾ ನಿರಾಶಾದಾಯಕವಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು, 10 ರಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿತ್ತು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ವಿಶ್ವಸನೀಯ ಮೂಲಗಳ ಪ್ರಕಾರ, ತಂಡದ ಮ್ಯಾನೇಜ್‌ಮೆಂಟ್ ಹಾಗೂ ಹಿರಿಯ ಆಟಗಾರರ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. ಸೀಸನ್‌ನ ಮಧ್ಯದಲ್ಲೇ ಪಾಂಡ್ಯ ತಮಗೆ ಮುಂಬೈ ಇಂಡಿಯನ್ಸ್‌ನಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂಬ ನಿರ್ಧಾರವನ್ನು ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಿರಿಯ ಆಟಗಾರರ ಕಡೆಯಿಂದ ಸಿಗದ ಬೆಂಬಲ ಹಾಗೂ ಕಪ್ತಾನನಾಗಿ ತಮಗೆ ಸಿಗದ ಸ್ವಾತಂತ್ರ್ಯದಿಂದ ಬೇಸತ್ತು ಹಾರ್ದಿಕ್ ಈ ಕಠಿಣ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ರೋಹಿತ್ ಶರ್ಮಾ ಕೈ ಸೇರಿತು ಕ್ಯಾಪ್ಟನ್ ಆಯ್ಕೆಜವಾಬ್ದಾರಿ!

2024 ರಲ್ಲಿ ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದಾಗ ಮುಂಬೈ ಮ್ಯಾನೇಜ್‌ಮೆಂಟ್ ಅಭಿಮಾನಿಗಳಿಂದ ಭಾರಿ ಆಕ್ರೋಶ ಎದುರಿಸಿತ್ತು. ಈಗ ಆ ತಪ್ಪನ್ನು ತಿದ್ದಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ. ಮೂಲಗಳ ಪ್ರಕಾರ, ಮುಂಬೈ ಇಂಡಿಯನ್ಸ್‌ನ ಮುಂದಿನ ನಾಯಕ ಯಾರು ಎಂಬುದನ್ನು ಸ್ವತಃ ಹಿಟ್‌ಮ್ಯಾನ್ರೋಹಿತ್ ಶರ್ಮಾ ಅವರೇ ನಿರ್ಧರಿಸಲಿದ್ದಾರೆ!

ಗಮನಾರ್ಹ ಅಂಶ: ರೋಹಿತ್ ಶರ್ಮಾ ಅವರು ಮತ್ತೆ ಮುಂಬೈ ತಂಡದ ನಾಯಕತ್ವ ವಹಿಸಿಕೊಳ್ಳುವುದಿಲ್ಲ. ಆದರೆ, ಮುಂಬೈ ಇಂಡಿಯನ್ಸ್‌ನ ಮುಂದಿನ ನಾಯಕ ಯಾರಾಗಬೇಕು ಎಂಬುದಕ್ಕೆ ರೋಹಿತ್ ಅವರ ಒಪ್ಪಿಗೆ ಹಾಗೂ ಆಶೀರ್ವಾದ (Blessings) ಅತ್ಯಂತ ಕಡ್ಡಾಯವಾಗಿದೆ. ರೋಹಿತ್ ಸೂಚಿಸುವ ಆಟಗಾರನಿಗೇ ಮುಂದಿನ ಸೀಸನ್‌ನಲ್ಲಿ ಮುಂಬೈ ಮುನ್ನಡೆಸುವ ಜವಾಬ್ದಾರಿ ಸಿಗಲಿದೆ.

ಮುಂದಿನ ಕಪ್ತಾನ ಯಾರು?

ರೋಹಿತ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ಮುಂಬೈ ಹೊಸಬರಿಗೆ ಮಣೆ ಹಾಕಲಿದೆಯೇ ಅಥವಾ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರಿಗೆ ಜವಾಬ್ದಾರಿ ಸಿಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ಹೊರನಡೆದರೆ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಸಂಪೂರ್ಣ ಹೊಸ ಆಲೋಚನೆಗಳೊಂದಿಗೆ ಕಣಕ್ಕಿಳಿಯುವುದು ಗ್ಯಾರಂಟಿ.

ಒಟ್ಟಾರೆಯಾಗಿ, ಮುಂಬೈ ಇಂಡಿಯನ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಯುಗ ಬಹುತೇಕ ಅಂತ್ಯವಾಗಿದ್ದು, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ತಂತ್ರ ಹಾಗೂ ಆಲೋಚನೆಗೆ ಮ್ಯಾನೇಜ್‌ಮೆಂಟ್ ಸಂಪೂರ್ಣ ಶರಣಾಗಿದೆ ಎಂಬುದು ಸದ್ಯದ ಕ್ರಿಕೆಟ್ ರಾಜಕೀಯದ ಬಿಸಿ ಬಿಸಿ ಸುದ್ದಿಯಾಗಿದೆ.

Leave a Reply

Your email address will not be published. Required fields are marked *