ಚಂಡೀಗಢ: ಅಪರಾಧ ಮತ್ತು ಹಿಂಸಾಚಾರಗಳಿಗೆ ಪ್ರಚೋದನೆ ನೀಡುತ್ತಿರುವ 200ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾಗಳ ಅಕೌಂಟನ್ನು ಬ್ಲಾಕ್‌ಮಾಡಲಾಗಿದೆ ಎಂದು ಪಂಜಾಬ್ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಅಪರಾಧ ಮಾಡಿರುವ ಪೋಟೋಗಳನ್ನು ವೈರಲ್ ಮಾಡುವುದು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ 132 ಪೇಸ್‌ಬುಕ್‌ಖಾತೆಗಳನ್ನು ಮತ್ತು 71 ಇನ್ಸ್ಟಾಗ್ರಾಂ ಖಾತೆಗಳ ಮೇಲೆ ನಿರ್ಬಂದವನ್ನು ಹೇರಲಾಗಿದೆ.
ಈ ಅಕೌಂಟ್‌ಗಳಲ್ಲಿ ದರೋಡೆಕೊರರ ಹೆಸರುಗಳನ್ನು ವೈಭವೀಕರಿಸುವುದು, ಅವರ ಪೋಟೋಗಳನ್ನು ಹಾಕುವುದು, ಸಮಾಜಘಾತುಕ ವಿಷಯಗಳನ್ನು ಹರಿಬಿಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.