ತಮಿಳಿನಲ್ಲಿ ದಳಪತಿ ಎಂದೇ ಪ್ರಸಿದ್ದಿ ಪಡೆದಿರುವ ವಿಜಯ್‌ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ಜನನಾಯಗನ್‌ ಇದೇ ತಿಂಗಳ9 ನೇ ತಾರೀಖಿನಂದು ಬಿಡುಗಡೆಯಾಗಲು ಸಿದ್ಧವಾಗಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಕಾದುನಿಂತಿದೆ.

ಯುಎಸ್‌ಎ ಮಲೇಷಿಯಾ ಸಿಂಗಾಪುರ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಆದರೆ ಅರಬ್‌ ರಾಷ್ಟ್ರಗಳಲ್ಲಿ ಬ್ಯಾನ್‌ ಮಾಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಜನನಾಯಗನ್‌ ಚಿತ್ರದ ಟ್ರೇಲರ್‌ ನೋಡಿ ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ.

ಅರಬ್‌ ರಾಷ್ಟ್ರಗಳಲ್ಲಿ ಈ ಚಿತ್ರ ಬ್ಯಾನ್‌ ಆಗಿರುವುದಕ್ಕೆ ಕಾರಣವೆನೆಂದರೆ, ಜನನಾಯಗನ್‌ ಚಿತ್ರದಲ್ಲಿ ವಿಲನ್‌ ಪಾತ್ರವನ್ನು ಮಾಡುವವ ಪಾಕಿಸ್ತಾನದಿಂದ ಬಂದು ನಮ್ಮ ದೇಶದಲ್ಲಿ ಆಕ್ರಮ ಚಟುವಟಿಕೆಗಳನ್ನು ಮಾಡುತ್ತಿರುತ್ತಾನೆ. ಆ ವಿಲನ್‌ಗೆ ಬುದ್ದಿ ಕಲಿಸುವ ಪಾತ್ರದಲ್ಲಿ ನಟ ವಿಜಯ್‌ ನಟಿಸಿದ್ದಾರೆ. ಇದೇ ಕಾರಣದಿಂದಾಗಿ ಮುಸ್ಲಿಮರು ಹೆಚ್ಚಿರುವ ರಾಷ್ಟ್ರಗಳಲ್ಲಿ ಚಿತ್ರವನ್ನು ನಿಷೇಧಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *