ನವದೆಹಲಿ: ಜನವರಿ 13, 2026 ರಂದು ಯುಜಿಸಿ ಬಿಡುಗಡೆ ಮಾಡಿದ್ದ ಹೊಸ ಮಾರ್ಗಸೂಚಿಗಳು ಕ್ಯಾಂಪಸ್ಗಳಲ್ಲಿ ತಾರತಮ್ಯ ತಡೆಯುವ ಉದ್ದೇಶ ಹೊಂದಿದ್ದವು. ಆದರೆ, ಈ ನಿಯಮಗಳು ತೀವ್ರ ವಿರೋಧಕ್ಕೆ ಗುರಿಯಾದವು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಈ ನಿಯಮಗಳು “ಸಮಾಜವನ್ನು ವಿಭಜಿಸುವ ಶಕ್ತಿ ಹೊಂದಿವೆ” ಮತ್ತು “ದುರುಪಯೋಗವಾಗುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟಿದೆ. ನಿಯಮಗಳು ಅಸ್ಪಷ್ಟವಾಗಿವೆ ಎಂಬುದು ನ್ಯಾಯಾಲಯದ ಪ್ರಮುಖ ಆಕ್ಷೇಪ.
ಹೊಸ ನಿಯಮಗಳಲ್ಲಿ ‘ಜಾತಿ ಆಧಾರಿತ ತಾರತಮ್ಯ’ ಎಂದರೆ ಕೇವಲ ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದವರ ಮೇಲೆ ನಡೆಯುವ ತಾರತಮ್ಯ ಮಾತ್ರ ಎಂದು ವ್ಯಾಖ್ಯಾನಿಸಲಾಗಿತ್ತು. ಇದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯವನ್ನು ನಿರ್ಲಕ್ಷಿಸುತ್ತದೆ ಮತ್ತು ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.ಅಲ್ಲಿಯವರೆಗೆ ಈ ಹೊಸ ನಿಯಮಗಳು ಜಾರಿಗೆ ಬರುವುದಿಲ್ಲ. ಬದಲಾಗಿ, ಹಳೆಯ 2012ರ ಯುಜಿಸಿ ನಿಯಮಗಳೇ ಮುಂದುವರಿಯಲಿವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಹೊಸ ನಿಯಮಗಳಿಂದಾಗಿ ಲಕ್ನೋ ವಿಶ್ವವಿದ್ಯಾಲಯ ಸೇರಿದಂತೆ ಹಲವೆಡೆ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ಗಳಲ್ಲಿ ಅಶಾಂತಿ ಉಂಟಾಗದಂತೆ ತಡೆಯಲು ನ್ಯಾಯಾಲಯವು ಈ ಮಧ್ಯಂತರ ತಡೆ ನೀಡಿದೆ.
