ಹೊಸಪೇಟೆ: ಕತೆಗಾರ, ವಿಮರ್ಶಕ ಮತ್ತು ಚಿಂತಕರಾದ ಮೊಗಳ್ಳಿ ಗಣೇಶ್‌ರವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನವಾಗಿದ್ದಾರೆಂದು ತಿಳಿದುಬಂದಿದೆ.

ಡಾ.ಮೊಗಳ್ಳಿ ಗಣೇಶ್‌ರವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ 28 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಹಲವು ಸಂಶೋಧನಾ ಯೋಜನೆಗಳ ಭಾಗವಾಗಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.

ಹಿರಿಯ ಬರಹಗಾರರ ಅಗಲಿಕೆಯಿಂದ ಕುಟುಂಬ ಮತ್ತು ಆಪ್ತ ಬಂಧುಬಳಗದವರು, ಹಲವಾರು ಸಾಹಿತಿಗಳು ಸಂತಾಪವನ್ನು ಸೂಚಿಸಿದ್ದಾರೆ.ಮೊಗಳ್ಳಿ ಗಣೇಶ್‌ರವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ.

Leave a Reply

Your email address will not be published. Required fields are marked *