ಕೊಲ್ಹಾಪುರ: ರಾಹುಲ್‌ ಗಾಂಧಿಯವರು ಲೇಖಕರರಾದ ಶಾಹು ಪಟೋಲೆಯವರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ದಲಿತ ಕುಟುಂಬಕ್ಕೆ ಭೇಟಿ ನೀಡುವುದರ ಮೂಲಕ ದಲಿತರ ಕಷ್ಟಗಳು, ಅವರ ಆಹಾರ ಪದ್ಧತಿ, ದಲಿತರು ಅನುಭವಿಸುತ್ತಿರುವ ತೊಂದರೆಗಳ(ಸಮಸ್ಯೆಗಳ) ಕುರಿತು ಚರ್ಚೆ ಮಾಡಿದ್ದಾರೆ.

ಅಜಯ್‌ ತುಕಾರಾಂ ಸಾನಡೆಯವರ ಮನೆಯಲ್ಲಿರುವ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್‌ ಅವರು, ಯಾವ ಆಹಾರವನ್ನು ಸೇವಿಸುತ್ತಾರೆ, ಅವರು ಪಾಕ ಪದ್ದತಿ ಏನು, ಅವರು ಹೇಗೆ ಅಡುಗೆಯನ್ನು ಮಾಡಿಕೊಳ್ತಾರೆ, ಅದರ ಮಹತ್ವವೇನು, ಎಂಬುದನ್ನು ಕೂತೂಹಲದಿಂದ ತಿಳಿದುಕೊಳ್ಳಲು ಅಜಯ್‌ ತುಕರಾಂ ಸಾನಡೆಯವರ ಕುಟುಂಬದವರೊಂದಿಗೆ ಕಾಲಕಳೆದಿರುವುದನ್ನು ತಮ್ಮ ಸೋಷಿಯಲ್‌ ಮೀಡಿಯಾದ ಅಕೌಂಟಿನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಆ ಕುಟುಂಬದವರು ನನ್ನನ್ನು ಬಹಳ ಪ್ರೀತಿ, ಗೌರವದಿಂದ ಬರಮಾಡಿಕೊಂಡರು. ನಾವೆಲ್ಲಾಒಟ್ಟಿಗೆ ಸೇರಿ ಅಡುಗೆ ಪದಾರ್ಥಗಳನ್ನು ತಯಾರಿಸಿದೆವು. ಅಜಯ್‌ ತುಕಾರಾಂ ಸಾನಡೆಯವರು ತಾವು ಜಾತಿತಾರತಮ್ಯದಿಂದ ಅನುಭವಿಸಿದ ಅವರ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡ್ರು. ಸಂವಿಧಾನವು ಬಹುಜನರಿಗೆ ಹಕ್ಕುಗಳನ್ನು ನೀಡಿದೆ.ನಾವೆಲ್ಲರೂ ಸೇರಿ ಅ ಹಕ್ಕುಗಳನ್ನು ರಕ್ಷಿಸಬೇಕಿದೆ. ಭಾರತೀಯರಲ್ಲಿ ಭ್ರಾತೃತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆ ಸಾದ್ಯ ಎಂದಿದ್ದಾರೆ.

Leave a Reply

Your email address will not be published. Required fields are marked *