ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟಿನಲ್ಲಿ ಅಕ್ರಮ ಮನೆಗಳನ್ನು ತೆರವು ಮಾಡಿರುವುದರಿಂದ ಜನರು ನಿರಾಶ್ರಿತರಾಗಿದ್ದಾರೆ ಅವರಿಗೆ ಮೊದಲು ವಸತಿಗಳನ್ನು ಕಲ್ಪಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷದಿಂದ ಸುಮಾರು 65 ಸಾವಿರ ಜನರು ಮನೆಗಳಿಲ್ಲ ಎಂದು ನೋಂದಣಿ ಮಾಡಿಸಿದ್ದಾರೆ.ಅವರಿಗಿನ್ನೂ ಮನೆಗಳ ಭಾಗ್ಯವಿಲ್ಲ.ನಿಮಗೆಲ್ಲಾ ಪಾಕಿಸ್ತಾನದವರನ್ನು ಕಂಡ್ರೆ ಹೆಚ್ಚು ಒಲವು ಎಂದು ನಮಗೆ ತಿಳಿದಿದೆ.ನೀವು ಮೊದಲು ರಾಜ್ಯದ ನಿರಾಶ್ರಿತರಿಗೆ ವಸತಿಗಳನ್ನಿ ನೀಡಿ ತದನಂತರ ನಿಮ್ಮ ಆದರ್ಶವನ್ನು ತೋರಿಸಿ ಎಂದು ಕಿಡಿಕಾರಿದ್ದಾರೆ.
ಬಾಂಗ್ಲಾದೇಶದವರಿಗೆ ಮನೆಗಳನ್ನು ನೀಡಿದರೆ ಆ ಮನೆಯ ಮೇಲೆ ಬಾಂಬ್ ಹಾಕ್ತಾರೆ, ಜೆ.ಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲುಗಳನ್ನು ತೂರಿದ್ದಾರೆ.ಅಯ್ಯಪ್ಪ ಮಾಲೆ ಹಾಕಿದವರ ಮೇಲೆ ಹಲ್ಲೆ ನಡೆಸುತ್ತಾರೆ. ಶ್ರೀರಾಮನ ಹೆಸರಿಟ್ಟುಕೊಂಡಿರುವ ಮುಖ್ಯಮಂತ್ರಿಗಳು, ಶಿವನ ಹೆಸರಿರುವ ಉಪಮುಖ್ಯಮಂತ್ರಿಗಳಿಗೆ ಹಿಂದೂಗಳ ಮೇಲೆ ಪ್ರೀತಿಯಿಲ್ಲ, ಎಂದು ವಾಗ್ದಾಳಿ ನಡೆಸಿದ್ದಾರೆ.
