ಬೆಂಗಳೂರು: ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ನ್ಯೂ ಇಯರ್‌ ಸಂಭ್ರಮ ಜೋರಾಗಿದ್ದು, ಜನವರಿ1ರ ದಿನವೇ ನಮ್ಮ ಮೆಟ್ರೋ 3.8ಕೋಟಿ ರೂಗಳನ್ನು ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವಿಚಾರದ ಕುರಿತು ಬಿಎಂಆರ್, ಸಿಎಲ್, ಸಿಪಿಆರ್‌ಒ,ಯಶವಂತ ಚವ್ಹಾಣ್ ಮಾಹಿತಿಯನ್ನು ಹಂಚಿಕೊಂಡಿದ್ದು,  ಒಂದೇ ಒಂದು ದಿನದಲ್ಲಿ ನಮ್ಮ ಮೆಟ್ರೋ 3.8ಕೋಟಿ ರೂ ಆದಾಯವನ್ನು  ಪಡೆದಿದೆ. ಸಾಮಾನ್ಯ ದಿನಕ್ಕಿಂತಲೂ ಹೆಚ್ಚಾಗಿ 1ಕೋಟಿ ರೂ ಆದಾಯವನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.

ನಿನ್ನೆಯಿಂದ ಪ್ರಾರಂಭವಾಗಿ ಇಂದು 3 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರವನ್ನು ನಡೆಸಿತ್ತು.  ನಿನ್ನೆ ಬೆಳಗ್ಗೆಯಿಂದ  ರಾತ್ರಿ 11 ಗಂಟೆಯವರೆಗೆ  ನಮ್ಮ ಮೆಟ್ರೋದಲ್ಲಿ  8.93 ಲಕ್ಷ ಜನರು  ಪ್ರಯಾಣಿಸಿದ್ದಾರೆ. ರಾತ್ರಿ 11ಗಂಟೆಯಿಂದ 40774 ಜನರು ಸಂಚರಿಸಿದ್ದಾರೆ. ಕ್ರಿಸ್ಮಸ್‌ ಲೀವ್‌  ಇರುವುದರಿಂದ  ನಮ್ಮ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.  ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ 7 ಲಕ್ಷದಲ್ಲಿದ್ದ ನಂಬರ್ 6 ಲಕ್ಷಕ್ಕೆ ಬಂದಿಳಿದಿತ್ತು. ಮಾಮೂಲಿ ದಿನಗಳಲ್ಲಿ 2.7 ಕೋಟಿ  ರೂ. ಆದಾಯವಿರುತ್ತಿತ್ತು. ಆದರೆ ನಿನ್ನೆ ಒಂದೇ ದಿನದಲ್ಲಿ ನಮ್ಮ ಮೆಟ್ರೋ 3.8 ಕೋಟಿ ಆದಾಯವನ್ನು ಬರಿಸಿದೆ. ನೆನ್ನಯಿಂದ ನಮ್ಮ ಮೆಟ್ರೋದಲ್ಲಿ  ಯಾವುದೇ ರೀತಿಯ ಅಹಿತಕರ ಘಟನೆಗಳು ಕಂಡುಬಂದಿಲ್ಲ ಎಂದು ಬಿಎಂಆರ್, ಸಿಎಲ್, ಸಿಪಿಆರ್‌ಒ,ಯಶವಂತ ಚವ್ಹಾಣ್  ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *