ಮಡಿಕೇರಿ: ಅನನ್ಯಾ ಭಟ್‌ ನನ್ನ ಮಗಳೆಂದು ವಸಂತಿ ಪೋಟೋ ತೋರಿಸಿರುವ ಸುಜಾತ ಭಟ್‌ರನ್ನು ಪೊಲೀಸರು ವಶಕ್ಕೆ ಪಡೆದ ನಂತರ ನನ್ನ ತಂಗಿ ವಸಂತಿ ಸಾವಿಗೆ ಸುಜಾತಭಟ್‌ ಕೈವಾಡವಿರಬಹುದು ಎಂದು ಸಹೋದರ ಗಂಭೀರ ಆರೋಪವನ್ನು ಮಾಡಿದ್ದಾನೆ.

ಅನನ್ಯಾ ಭಟ್‌ ನಾಪತ್ತೆ ವಿಚಾರದ ತನಿಖೆ ಚುರುಕಾಗುತ್ತಿದ್ದರೆ ಮತ್ತೊಂದು ಕಡೆ ನನ್ನ ತಂಗಿ ವಸಂತಿ ಸಾವಿನ ಹಿಂದೆ ಸುಜಾತ ಭಟ್‌ ಕೈವಾಡವಿರಬಹುದೆಂಬ ಶಂಕೆಯನ್ನು ವಾಸಂತಿ ಸಹೋದರ ವ್ಯಕ್ತಪಡಿಸುತ್ತಿದ್ದಾರೆ.

ವಸಂತಿ ಸಹೋದರನಾದ ವಿಜಯ್‌,ನನ್ನ ತಂಗಿ ವಸಂತಿ ಮದುವೆಯಾದ 2 ತಿಂಗಳಿಗೆ ಸಾವನ್ನಪ್ಪಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ ನನ್ನ ತಂಗಿ. ಅವಳದು ಸಹಜ ಸಾವಲ್ಲ ಅಸಜ ಸಾವು. ಇದರ ಬಗ್ಗೆ ತನಿಖೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ.

ಸುಜಾತ ಭಟ್‌ ಬಳಿ ವಸಂತಿಯ ಹಣ,ಬಟ್ಟೆ,ಚಿನ್ನಾಭರಣಗಳೆಲ್ಲವೂ ಇವೆ. ಆಕೆ ಸಾವಿನ ಬಗ್ಗೆ ನಮಗೆ ಈಗಲೂ ಸಂಶಯವಿದೆ.ವಸಂತಿ ಸಾವನ್ನಪ್ಪಿದ ನಂತರ ಅವರ ಪತಿ ಯಾವುದೇ ರೀತಿಯ ದೂರು ದಾಖಲಿಸಿಲ್ಲ.ಆದರೆ ಸುಜಾತಾ ಭಟ್‌ ಮಡಿಕೇರಿಗೆ ಬಂದು ಡೆತ್‌ ಸರ್ಟಿಫಿಕೆಟ್‌ ತೆಗೆದುಕೊಂಡು ಹೋಗಿದ್ದಾಳೆ ಎಂಬ ಮಾಹಿತಿಯಿದೆ.

ಅನನ್ಯಾ ಭಟ್‌ ನಾಪತ್ತೆ ವಿಚಾರದಲ್ಲಿ ವಸಂತಿ ಭಾವಚಿತ್ರವನ್ನು ತೋರಿಸಿ ನನ್ನ ಮಗಳು ಎಂದು ಸುಳ್ಳು ಹೇಳಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ವಸಂತಿ ಸಾವಿನ ಹಿಂದೆ ಸುಜಾತಾ ಭಟ್‌ ಕೈವಾಡವಿದೆ ಆದ್ದರಿಂದ ವಿಚಾರದ ಕುರಿತು ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *