ಬೆಂಗಳೂರು: ಸರ್ಕಾರಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಋತುಚಕ್ರ ರಜೆಯನ್ನು ನೀಡುವುದಕ್ಕೆ ಪುರುಷರು ವಿರೋಧವನ್ನು ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಬಾಗದ ನೌಕರರು ಋತುಚಕ್ರದ ವಿಚಾರದ ಕುರಿತು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ. ತಿಂಗಳಿಗೆ ಒಂದು ದಿನದಂತೆ ವರ್ಷದ 12 ದಿನವನ್ನು ನೀಡುವುದರ ಬಗ್ಗೆ ಪರಿಶೀಲಿಸುವಂತೆ ಕೋರಿ ಪತ್ರವನ್ನು ಬರೆದಿದ್ದಾರೆ.

