‘ಬ್ರಾಹ್ಮಣರ ವಿರುದ್ದ ಹೇಳಿಕೆಯನ್ನು ನೀಡಿದ್ದೆನೆ ಎಂದು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಿದವರಿಗೆ ನಾನು ಹೇಳುವೆದೇನೆಂದರೆ, ನಾನು ಬ್ರಾಹ್ಮಣ ದ್ವೇಷಿಯಲ್ಲ; ಬ್ರಾಹ್ಮಣರನ್ನು  ಸಿಎಂ ಮಾಡಬಾರದೆಂದು ನಾ ಹೇಳಿಲ್ಲ. ಆದರೆ ರಾಜ್ಯದಲ್ಲಿ ಪೇಶ್ವೆ ಡಿಎನ್ಎಯವರು ಸಿಎಂ ಆಗಬಾರದೆಂದು ನಾನು ಹೇಳಿದ್ದೇನೆʼ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಬಗ್ಗೆ ತಿರುಚಿದ ಹೇಳಿಕೆಯ ಪರಿಣಾಮ ಇಡೀ ಬ್ರಾಹ್ಮಣರ ಸಮುದಾಯವೇ ನನ್ನ ವಿರುದ್ಧ ತಿರುಗಿಬಿದ್ದಿದ್ದು ಯಾರೂ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಪೇಶ್ವೆ ಡಿಎನ್‌ಎ ಕುರಿತಷ್ಟೇ ನನ್ನ ಪ್ರಶ್ನೆ ಎಂದಿದ್ದಾರೆ. ಬ್ರಾಹ್ಮಣರನ್ನು  ಸಿಎಂ ಮಾಡಬಾರದೆಂದು ನಾ  ಹೇಳಿಲ್ಲ. ಆದರೆ ರಾಜ್ಯದಲ್ಲಿ ಪೇಶ್ವೆ ಡಿಎನ್ಎಯವರು ಸಿಎಂ ಆಗಬಾರದೆಂದು ನಾನು ಹೇಳಿದ್ದೆ, ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮೂಲ ಕಾರಣ ಸಿದ್ದರಾಮಯ್ಯ. ಹೇಗೆಂದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಾಗ ಕೇವಲ  ಎರಡೇ ತಿಂಗಳಲ್ಲಿ ಸರ್ಕಾರದ ಪತನದ ಬಗ್ಗೆ ಪ್ರಸ್ತಾಪ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ, ಬಿಜೆಪಿಯ ಎಲ್ಲಾ ಅಕ್ರಮಗಳನ್ನು ಬಯಲು ಮಾಡಿದ್ದು ನಾನುʼ ಎಂದು ಸಿದ್ದರಾಮಯ್ಯನವರ ವಿರುದ್ದವೂ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *