ಬೆಂಗಳೂರು: ಕಿಚ್ಚ ಸುದೀಪ್‌ ನಟನೆಯ ಮಾರ್ಕ್‌ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ನೀಡುತ್ತೀಊದೆ.ಇದರ ನಡುಬೆ ಪೈರಸಿಯ ಭೂತ ಈ ಮಾರ್ಕ್‌ ಚಿತ್ರಕ್ಕೂ ಶುರುವಾಗಿದ್ದು, ಪೈರಸಿ ಕಾಟದ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ.

ಎಲ್ಲಾ ಸಿನಿಮಾಗಳಿಗೂ ಪೈರಸಿ ಭೂತ ಬಂದು ಕಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.ಆದರೆ ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ನೀಡುವ ಸಮಯದಲ್ಲೇ ಈ ಪೈರಸಿ ಬೂತ ಬಂದು ಕಾಡಿತ್ತು.ಅದೇ ರೀತಿ ಸುದೀಪ್‌ ನಟನೆಯ ಮಾರ್ಕ್‌ ಚಿತ್ರಕ್ಕೂ ಪೈರಸಿಯ ಭೂತ ಕಾಟ ಕೊಡದೇ ಬಿಟ್ಟಿಲ್ಲ.‌

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಚಿತ್ರತಂಡ ಸುಮಾರು 4000 ಪೈರಸಿ ಲಿಂಕ್‌ಗಳನ್ನು ಡಿಲಿಟ್‌ ಮಾಡಿದ್ದೇವೆ. ಮೊದಲ ದಿನದಿಂದ ಹಿಡಿದು ಇಂದಿನವರೆಗೂ ಡಿಲೀಟ್‌ ಮಾಡುತ್ತಲೇ ಇದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಂದಿನಿಂದ ಇಂದಿನವರೆಗೂ ಸುಮಾರು 9000 ಲಿಂಕ್‌ಗಳನ್ನು ಡಿಲೀಟ್‌ ಮಾಡಿದ್ದೇವೆ . ಡಿಲೀಟ್‌ ಮಾಡಿದಷ್ಟೂ ಇನ್ನೂ ಹೆಚ್ಚು ಮಾಡುತ್ತಿದ್ದಾರೆ.ಕಳೆದ ಬಾರಿಯೂ ಈ ರೀತಿಯಾಗಿದ್ದರಿಂದ ಕೆಲವು ಕಿಡಿಗೇಡಿಗಳನ್ನು ಹಿಡಿದಾಕಿದ್ದೇವು.ಈ ಬಾರಿ ಸಿಕ್ಕರೆ ಅವರನ್ನು ಬಿಡುವ ಚಾನ್ಸ್‌ಇಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *