ಬೆಂಗಳೂರು: ಸ್ಯಾಂಟಲ್ ವುಡ್‌ ಅಭಿನಯ ಚಕ್ರವರ್ತಿಯೆಂದೇ ಪ್ರಸಿದ್ದಿಯನ್ನು ಪಡೆದುಕೊಂಡಿರುವ ಕಿಚ್ಚ ಸುದೀಪ್‌ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಚಲನಚಿತ್ರ ನಟ-ನಟಿಯರನ್ನು ಟಾರ್ಗೆಟ್‌ ಮಾಡಿ ಕೆಟ್ಟ ಕೆಟ್ಟ ಅಶ್ಲೀಲ ಕಮೆಂಟ್‌ಗಳನ್ನು ಮಾಡುವುದರ ಮೂಲಕ ಸ್ಟಾರ್‌ ವಾರ್‌ ನಡೆಯಲು ಕಾರಣಕರ್ತರಾಗಿದ್ದಾರೆ ಕೆಲವು ಕಿಡಿಗೇಡಿಗಳು.ಈ ವಿಷಯಕ್ಕೆ ಸಂಬಂಧಿಸಿದಂತೆ ಕಿಚ್ಚ ಸದೀಪ್‌ರವರು ಆನ್ಲೈನಿನಲ್ಲಿ ನನ್ನನ್ನು ಯಾರೇ ಬೈದರೂ ಅದಕ್ಕೆ ಪ್ರತಿಕ್ರಿಯೆ ನೀಡಲು ಹೋಗಬೇಡಿ ಎಂದು ಬೆಂಗಳೂರಿನ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ತಮ್ಮ 52ನೇ ಹುಟ್ಟುಹಬ್ಬದ ಆಚರಣೆಯ ವೇಳೆಯಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅದೇ ವೇಳೆಯಲ್ಲಿ ಮಾತನಾಡಿದ ಅವರು, ಯಾವ ನಟ-ನಟಿಯರಿಗೂ ಅವಮಾನ ಮಾಡಬೇಡಿ. ಸೋಷಿಯಲ್‌ ಮೀಡಿಯಾದಲ್ಲಿ ನನ್ನನ್ನು ಬೈದರೂ ಕೂಡಾ ರಿಯಾಕ್ಟ್‌ ಮಾಡಬೇಡಿ ಎಂದು ಹೇಳಿದ್ದಾರೆ.ಕಿಚ್ಚ ಸುದೀಪ್‌ ಬರ್ತಡೆ ಅಂಗವಾಗಿ ʼಮಾರ್ಕ್‌ʼ ಸಿನಿಮಾದ ಟೈಟಲನ್ನು ಬಿಡುಗಡೆ ಮಾಡಲಾಗಿದ್ದು, ʼಬಿಗ್‌ಬಾಸ್‌ ಸೀಸನ್‌ 12ರ ದಿನಾಂಕವನ್ನು ಕೂಡಾ ಘೋಷಿಸಿದ್ದಾರೆ.

ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಹೆಚ್ಚು ಅಭಿಮಾನಿಗಳು ಆಗಮಿಸಿ ಶುಭಕೋರಿದ್ದಾರೆ.

Leave a Reply

Your email address will not be published. Required fields are marked *