ನೇಪಾಳದ ಕಟ್ಮಂಡುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಭಾರತೀಯ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಈ ಘಟನೆಯಲ್ಲಿ ಹೆಚ್ಚು ಜನರು ಗಾಯಗೊಂಡಿರುವುದು ವರದಿಯಲ್ಲಿ ತಿಳಿದುಬಂದಿದೆ.
ಕಲ್ಲು ತೂರಾಟ ನಡೆಸಿದ ದುಷ್ಟಕರ್ಮಿಗಳು ಬಸ್ನಲ್ಲಿದ್ದ ಜನರ ವಸ್ತುಗಳನ್ನೆಲ್ಲಾ ಕೊಳ್ಳೆ ಹೊಡೆದಿದ್ದಾರೆ.ಪಶುಪತಿನಾಥ ದೇವಸ್ಥಾನದಿಂದ ಹಿಂದಿರುಗುತ್ತಿವಾಗ ನಡೆದಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಬಸ್ ಆಗಿತ್ತು. ಕಲ್ಲುತೂರಾಟದ ದಾಳಿಯಲ್ಲಿ 7-8 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಆ ಬಸ್ಸಿನಲ್ಲಿಯೇ ನೇಪಾಳದ ಬಸ್ ಸಿಬ್ಬಂದಿ ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ ಎನ್ನಲಾಗಿದೆ.
