ಚಳಿಗಾಲ ಶುರುವಾಗುತ್ತಿದ್ದಂತೆ ಎಲ್ಲೋ ಎತ್ತಿಟ್ಟಿದ್ದ ಸ್ವೇಟರ್, ಟೋಪಿ, ಸಾಕ್ಸ್, ಗ್ಲೌಸ್ ಇನ್ನೂ ಮುಂ ತಾದವನ್ನು ಮೊದಲು ಆಚೆ ತೆಗೆದು ಸ್ವಚ್ಚಗೊಳಿಸಿ ಉಪಯೋಗಿಸಲು ಮುಂದಾಗುತ್ತೇವೆ.
ಈ ಚಳಿಯೆಂಬುದು ನಮ್ಮ ದಿನಚರಿಯನ್ನು ಹೇಗೆಲ್ಲಾ ಚೆಂಜ್ ಮಾಡುತ್ತದೆ ಎಂಬುದನ್ನು ತಿಳಿಯೋಣ.
ಚಳಿಗಾಲದಲ್ಲಿ ಚಳಿ ಹೆಚ್ಚಿರುವ ಕಾರಣ ಮಕ್ಕಳು ಹೊರಗೆ ಆಟವಾಡಲು ಹೋಗುವುದಿಲ್ಲ.
ಯಾವಾಗಲೂ ಲೇಟಾಗಿ ಬರುತ್ತಿದ್ದವರು ಚಳಿಯ ಕಾರಣದಿಂದ ಮೊದಲು ಮನೆಗೆ ಹೋದರೆ ಸಾಕು ಎಂದು ಬೇಗ ಮನೆಗೆ ಬರುತ್ತಾರೆ.
ಬೇಗ ಬೇಗ ಕೆಲಸಗಳನ್ನು ಮುಗಿಸಿ ಬೆಚ್ಚಗೆ ಮಲಗೋಣ ಎಂದು ತುಂಬಾ ಕ್ರೀಯಾಶೀಲರಾಗಿ ಕಾರ್ಯಗಳಲ್ಲಿ ತೊಡಗುವುದು.
ಚಳಿಗಾಲದಲ್ಲಿ ಎಷ್ಟು ಬೆಚ್ಚಗಿರುವ ಸೈಟರ್, ಸಾಕ್ಸ್ ಹಾಕಿಕೊಂಡರೂ ಕೂಡಾತಣ್ಣನೆಯ ಅನುಭವವಾಗುತ್ತಿರುತ್ತದೆ. ಅಯ್ಯೋ ಇಷ್ಟೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಮಾಡಿದ್ರೂ ಚಳಿಯಾಗ್ತಿದೆ ಎಂದು ಗೊಣಗಾಡುತ್ತೀರಿ.

ಚಳಿಗಾಲದಲ್ಲಿ ಬೀಸುವ ಒಣಗಾಳಿಯಿಂದಾಗಿ ನಮ್ಮ ದೇಹದಲ್ಲಿರುವ ರಕ್ತನಾಳಗಳು ಸಂಕುಚಿತವಾಗಿ ರಕ್ತ ಸಂಚಾರ ಕ್ರಮೇಣ ನಿಧಾನಗತಿಯಲ್ಲಿರುತ್ತದೆ.ರಕ್ತ ಸಂಚಾರ ನಿಧಾನವಾಗುವ ಕಾರಣ ಎಲ್ಲಾ ಅಂಗಾಂಗಗಳಿಗೆ ಒಮ್ಮೆಲೆ ರಕ್ತಸಂಚಾರವಾಗದ ಕಾರಣ ಮೂಗಿನ ತುದಿ, ಕೈಕಾಲುಗಳು ತಣ್ಣಗಿರುವಂತೆ ಭಾಸವಾಗುತ್ತವೆ.
ನಮ್ಮ ದೇಹದಲ್ಲಿರುವ ಅಂಗಗಳಿಗೆ ಸರಿಯಾದ ರೀತಿಯಲ್ಲಿ ರಕ್ತ ಪೂರೈಕೆಯಾದಾಗ ಮಾತ್ರ ದೇಹದ ಉಷ್ಣತೆ ಸರಿಯಾಗಿರುತ್ತದೆ. ರಕ್ತದ ಪ್ರಮಾಣ ಕಡಿಮೆಯಾದಾಗ ಹೆಚ್ಚಿನ ಚಳಿ ಅನುಭವವಾಗುತ್ತದೆ.
