ನವದೆಹಲಿ:ಬೆಂಗಳೂರಿನ ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ .ಸಿಎಂ ನಯಾಬ್ ಸಿಂಗ್ ಸೈನಿ ಮಾತನ್ನೂ ಉಲ್ಲೇಖಿಸಿ ಆರೋಪಿಸಿದ್ದಾರೆ.ನಮ್ಮ ನಡುವೆ 22ಸಾವಿರ ಮತಗಳ ಅಂತರವಿದೆ.ಹರಿಯಾಣದ ಮಹಿಳೆ 10 ಬೂತುಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಮತ ಚಲಾವಣೆ ಮಾಡಿದ್ದಾಳೆ.
10 ಬೂತುಗಳಲ್ಲಿ 22 ಮತಗಳನ್ನು ಹಾಕಿರುವ ಮಹಿಳೆ 25 ಲಕ್ಷ ಮತಗಳತನಕ್ಕೆ ಸಾಕ್ಷಿಯಾಗಿದ್ದಾಳೆ.ಚುನಾವಣಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ವರದಿಗಳು ಬಂದರು ಕೂಡ ರಿಸಲ್ಟ್ ಬಂದ ನಂತರ ಬಿಜೆಪಿ ಕ್ಯಾಂಡಿಡೇಟ್ ಗೆದ್ದಿದ್ದರು.ಆದ್ದರಿಂದ್ದ ನಾನು ಹೇಳುತ್ತಿರುವುದು 100ಕ್ಕೆ 100%ನಿಜ.ಮಹಾರಾಷ್ಟ್ರದಲ್ಲೂ ಇದೇ ರೀತಿಯಾಗಿದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ.
