ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಯಾರೂ ಊಹಿಸದ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದು ದೋಷಿ ಪ್ರಜ್ವಲ್‌ ರೇವಣ್ಣನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ 10 ಲಕ್ಷ ದಂಡವನ್ನು ವಿಧಿಸಿದೆ.
ಹೌದು ಇಂದು ಪ್ರಜ್ವಲ್‌ ರೇವಣ್ಣ ಪರ ವಕೀಲರ ವಾದ ಮತ್ತು ಪ್ರತಿವಾದವನ್ನು ಆಲಿಸಿದ ಜಡ್ಜ್‌ IPCಸೆಕ್ಷನ್‌ 376 (2) (K)ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ ದಂಡ ಮತ್ತು IPC ಸೆಕ್ಷನ್‌ 376(2) (n) ಪ್ರಕಾರ ಜೀವನಪರ್ಯಂತ ಸೆರೆವಾಸದ ಶಿಕ್ಷೆಯನ್ನು ಪ್ರಕಟಿಸಿದೆ.
ಕೋರ್ಟ್‌ ಶಿಕ್ಷೆಯನ್ನು ಪ್ರಕಟಿಸಿದ ನಂತರದಿಂದಲೇ ಪ್ರಜ್ವಲ್‌ ರೇವಣ್ಣನ ಜೈಲು ಶಿಕ್ಷೆ ಆರಂಭವಾಗಿದೆ.ಅಲ್ಲದೆ ಸಂತ್ರಸ್ತೆಗೆ ಪರಿಹಾರವನ್ನು ನೀಡುವಂತೆ ಸೂಚನೆಯನ್ನ ನೀಡಿದೆ.

Leave a Reply

Your email address will not be published. Required fields are marked *