ಚಳಿಗಾಲವೆಂದರೆ ಅಯ್ಯೋ ಈ ಚಳಿಯಲ್ಲಿ ಇಷ್ಟು ಬೇಗ ಎದ್ದು ಏನು ಮಾಡುವುದು ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎನ್ನುವವರೇ . ಏಕೆಂದರೆ ಚಳಿಗೆ ನಮ್ಮ ದೇಹ ಬೆಚ್ಚಗಿರುವ ವಾತವರಣವನ್ನು ಬಯಸುತ್ತದೆ ಅದ್ದರಿಂದ ಬೆಚ್ಚಗಿರುವ ಹೊದಿಕೆಯನ್ನು ಬಿಟ್ಟು ಏಳಲು ಮನಸ್ಸು ಇಚ್ಚಿಸುವುದಿಲ್ಲ.
ಚಳಿಗಾಲದಲ್ಲಿ ಜನರು ನೀರು ತನ್ಣಗಿರುವ ಕಾರಣ, ಬಾಯಾರಿಕೆಯಾಗದ ಕಾರಣ ಹೆಚ್ಚು ಅಲ್ಲದೇ ಇದ್ದರೂ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯದೆ ನಿರ್ಲಕ್ಷ್ಯ ಮಾಡುತ್ತಾರೆ.
ಮನುಷ್ಯನ ದೇಹ ಎಲ್ಲಾ ವಾತವರಣಕ್ಕೂ ಸೆಟ್ ಆಗಲು ಕೆಲವೊಂದಿಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಚಳಿಗಾಲದಲ್ಲಿ ಹೆಚ್ಚು ನೀರು ಕುಡಿದರೆ ಹೆಚ್ಚು ಮೂತ್ರ ವಿಸರ್ಜಿಸಲು ತೆರಳಬೇಕಾಗುತ್ತದೆ ಎಂದು ಕೆಲವರು ನೀರು ಕುಡಿಯುವುದನ್ನೇ ಕಡಿಮೆ ಮಾಡುತ್ತಾರೆ.
ಮತ್ತೆ ಕೆಲವರು ತಣ್ಣಗಿರುವ ನೀರು ಎಂದಾದರೆ ಮತ್ತೆ ಕೆಲವರು ಬಿಸಿ ನೀರು ಕುಡಿದು ಅಭ್ಯಾಸವಿಲ್ಲವೆಂದು ಹೀಗೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿದು ದೇಹದಲ್ಲಿ ನೀರಿನ ಕೊರತೆಯನ್ನು ತಂದೊಡ್ಡುತ್ತೇವೆ.

ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯಲು ಕಾರಣಗಳೇನು ಎಂಬುದನ್ನು ತಿಳಿಯೋಣ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ರಕ್ತನಾಳಗಳು ಸಂಕುಚಿತಗೊಳ್ಳುವ ಕಾರಣದಿಂದ ಮೆದುಳು ನೀರಿನ ಕೊರತೆಯಿಲ್ಲವೆಂದುಕೋಳ್ಳುತ್ತದೆ.
ವಿಜ್ಞಾನದ ಅಧ್ಯಯನಗಳ ಪ್ರಕಾರ ಈ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ತಣ್ಣನೆಯ ಗಾಳಿಯನ್ನು ತೆಗೆದುಕೊಂಡು ಬೆಚ್ಚನೆಯ ಉಸಿರನ್ನು ಹೊರಕ್ಕೆ ಬಿಡುವುದು ಕೂಡಾ ನೀರಿನ ಅಭಾವಕ್ಕೆ ಕಾರಣ.
ಹೆಚ್ಚು ಚಳಿಯಾಗುತ್ತದೆ ಎಂದು ದಪ್ಪ ವಸ್ತ್ರಗಳನ್ನು ಹಾಕಿಕೊಳ್ಳುವುದರಿಂದ ಬೆವರುತ್ತಾರೆ ಎಷ್ಟು ಬೆವರಿದ್ದಾರೆ ಎಷ್ಟು ಬೆವರು ಆವಿಯಾಗಿದೆ ಎಂಬುದರ ಅಂದಾಜು ನಮಗಿರುವುದಿಲ್ಲ.
ಚಳಿಗಾಲವೆಂದರೆ ಗಂಟೆ ಗಂಟೆಗೂ ಕಾಫಿ ಟೀ ಕುಡಿಯುವ ಅಭ್ಯಾಸವಿರುತ್ತದೆ ಈ ಕಾರಣದಿಂದಲೂ ದೇಹ ನಿರ್ಜಕೀಕರಣವಾಗುತ್ತದೆ.

ಕೆಲವರು ನೀರನ್ನು ಕುಡಿಯುವುದನ್ನೇ ಮರೆತವರಂತೆ ಇರುತ್ತಾರೆ.
ಇನ್ನೂ ಕೆಲವರು ಊಟ ಮಾಡುವ ಸಮಯದಲ್ಲಿ ಮಾತ್ರ ನೀರನ್ನು ಕುಡಿಯುತ್ತಾರೆ.
ಕಡಿಮೆ ನೀರು ಸೇವಿಸಿದರೆ ಈ ಚಳಿಗಾಲದಲ್ಲಿ ದೇಹದ ಚರ್ಮ ಒಣಗಿ ಬಿರುಕು ಬಿಡುತ್ತದೆ, ನಮ್ಮ ಮೆದುಳು ಕಾರ್ಯವೈಖರಿಯನ್ನು ನಿಧಾನವಾಗಿಸುತ್ತದೆ. ಕಡಿಮೆ ನೀರು ಕುಡಿದರೆ ಮೂತ್ರ ಸಂಬಂದಿತ ಸೋಂಕುಗಳು ಬಂದು ಕಾಡುತ್ತವೆ.ನೀರಿನ ಕೊರತೆಯನ್ನು ನಮಗೆ ಮನವರಿಕೆ ಮಾಡುವಂತಹ ಸಿಂಪಲ್ ಟಿಪ್ ಎಂದರೆ ತುಟಿ ಒಣಗುವುದು ಈ ಲಕ್ಷಣ ಕಂಡುಬಂದ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು.
ಹೀಗೆ ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯದೆ ಇಲ್ಲದ ಕಾರಣಗಳನ್ನು ಹೇಳುತ್ತಾ ಕುಳಿತುಕೊಂಡರೆ ಹಲವಾರು ಸೋಂಕುಗಳಿಗೆ ನಾವೇ ದಾರಿ ಮಾಡಿಕೊಡುವ ಹಾಗೆ ಆಗುತ್ತದೆ ಆದ್ದರಿಂದ ಕಾಲ ಯಾವುದ್ದೇ ಇರಲಿ, ನಮ್ಮ ದೇಹಕ್ಕೆ ಅವಶ್ಯವಿರುವ ನೀರನ್ನು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
