ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ನಿರ್ದೇಶಕ ಎಸ್.ನಾರಾಯಣ್ ಪತ್ನಿ ಮತ್ತು ಪುತ್ರನ ವಿರುದ್ದ ಪ್ರಕರಣ ದಾಖಲಾಗಿದ್ದು, ಕೋಟ್ ನೋಟಿಸ್ ನೀಡಿದೆ.
ನಟ, ನಿರ್ದೇಶಕರಾದ ಎಸ್.ನಾರಾಯಣ್ ಪುತ್ರ ಪವನ್ರವರ ಪತ್ನಿ ಪವಿತ್ರ ಎಂಬುವವರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರನ್ನು ದಾಖಲಿಸಲಾಗಿತ್ತು.ದೂರನ್ನು ದಾಖಲಿಸಿಕೊಂಡ ಪೊಲೀಸರು ಎಸ್.ನಾರಾಯನ್ ಪುತ್ರ ಮತ್ತು ಪತ್ನಿ ಭಾಗ್ಯವತಿಗೆ ನೋಡಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಸಿದಂತೆ 3 ದಿನಗಳ ಕಾಲ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಪವಿತ್ರಾ ನೀಡಿದ ದೂರಿನನ್ವಯ ಎಸ್.ಮಹೇಂದರ್ ನಿವಾಸದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ . ಇನ್ನೊಂದೆಡೆ ಪವಿತ್ರಾಗೆ ದೂರಿನನ್ವಯ ಸಾಕ್ಷಾಧಾರಗಳನ್ನು ನೀಡುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ.
