ನವದೆಹಲಿ: ಏಷ್ಯಾಕಪ್‌ ಸಮಯದಲ್ಲಿ ಭಾರತದ ಪುರುಷರ ತಂಡ ತೆಗೆದುಕೊಂಡ ನಿರ್ಧಾರದ ನಂತರ , ಭಾನುವಾರ ನಡೆಯಲಿರುವ ಮಹಿಳಾ ವಿಶ್ವಕಪ್‌ ಲೀಗ್‌ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆಟಗಾರ್ತಿಯವರ ಹ್ಯಾಂಡ್‌ ಶೇಕ್‌ ಮಾಡದಂತೆ ಬಿಸಿಸಿಐ ಮಹಿಳಾ ತಂಡಕ್ಕೆ ಸೂಚನೆಯನ್ನ ನೀಡಿದೆ ಎಂದು ವರದಿಗಳು ತಿಳಿಸಿವೆ.

ಪ್ರಾರಂಭವಾಗುವ ಮುನ್ನ ಮತ್ತು ಟಾಸ್‌ ಹಾಕುವ ವೇಳೆ ಹಾಗೂ ಪಂದ್ಯದ ನಂತರ ಕೈ ಕುಲುಕಬಾರದೆಂದು ಬುಧವಾರ ಮಹಿಳಾ ಆಟಗಾರ್ತಿಯರು ಹೊರಡುವ ಮುನ್ನ ತಿಳಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಏಷ್ಯಾಕಪ್‌ ಕ್ರಿಕೆಟ್‌ ಲೀಗ್‌ನಲ್ಲಿ ಪುರುಷರ ತಂಡವೂ ಪಾಕಿಸ್ತಾನವನ್ನು 3 ಬಾರಿ ಎದುರಿಸಿ , 5 ವಿಕೆಟ್‌ಗಳಿಂದ ಗೆದ್ದು ಫೈನಲ್‌ಗೂ ಕೂಡ ಸೇರಿದೆ.ಅದೇ ರೀತಿಯಲ್ಲಿ ಮಂಗಳವಾರ ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ದ ಮೊದಲ ಪಂದ್ಯವನ್ನು ಆಡಿ ಗೆದ್ದ ನಂತರ ಪಾಕಿಸ್ತಾನದ ಜೊತೆ ಎರಡನೇ ಪಂದ್ಯವಾಗಿದೆ.

Leave a Reply

Your email address will not be published. Required fields are marked *