ಬಾಗಲಕೋಟೆ: ಸಹಪಾಠಿಗಳ ರ್ಯಾಗಿಂಗ್‌ನಿಂದ ಮನನೊಂದ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಸಾವನಪ್ಪಿರುವ ಘಟನೆಯು ಬಾಗಲಕೋಟೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದುರ್ದೈವಿ ವಿದ್ಯಾರ್ಥಿನಿ ಅಂಜಲಿ ಮುಂಡಾಸ್ ಎಂಬುವವರು ಗುಳೇದಗುಡ್ಡದ ಬಂಡಾರಿ ಕಾಲೇಜ್‌ನಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದುಬಂದಿದೆ.
ನನ್ನ ಸಹಪಾಠಿ ವರ್ಷ ಮತ್ತು ಪ್ರದೀಪ್ ಎಂಬುವವರಿಂದ ಕಿರುಕುಳ ಅನುಭವಿಸಿರುವ ಅಂಜಲಿ ಮುಂಡಾಸ್ ಬರೆದಿರುವ ಡೆತ್‌ನೋಟಿನಲ್ಲಿ ಹೀಗಿದೆ: ನನ್ನನ್ನು ವರ್ಷ ಮತ್ತು ಪ್ರದೀಪ್ ಮಾನಸಿಕವಾಗಿ ಹಿಂಸೆಯನ್ನು ನೀಡಿ ಕುಗ್ಗಿಸಿದ್ದಾರೆ ಮತ್ತು ನನ್ನ ಬದುಕಿಗೆ ಮಾರಕವಾದ ವ್ಯಕ್ತಿಗಳಾಗುತ್ತಾರೆ. ಇವರಿಬ್ಬರನ್ನು ಸುಮ್ಮನೆ ಬಿಡಬಾರದು ಇವರೇ ನನ್ನ ಸಾವಿಗೆ ಕಾರಣವೆಂದು ಉಲ್ಲೇಖ ಮಾಡಿದ್ದಾಳೆ ಎನ್ನಲಾಗಿದೆ.
