ಡಿಸೆಂಬರ್ 11 ರಂದು ದಿ ಡೆವಿಲ್ ಸಿನಿಮಾ ರಿಲೀಸ್ ಆಗಿದ್ದು, ಅಂದಿನಿಂದ ಇಂದಿನವರೆಗೂ ಅದ್ದೂರಿ ಪ್ರದರ್ಶನವನ್ನು ಪಡೆದುಕೊಳ್ಳುತ್ತಿದೆ.ಡೆವಿಲ್ ಸಿನಿಮಾ ಪ್ರಚಾರ ಮಾಡದೇ ಇದ್ರೂ ಬ್ಯಾಕ್‌ಬ್ಲಸ್ಟರ್ ಆಗಿ ಪ್ರದರ್ಶನ ಪಡೆದು ಜನರಿಂದ ಒಳ್ಳೇಯ ರೆಸ್ಪಾನ್ಸ್ ಪಡೆದಿದೆ ಎಂದರೆ ತಪ್ಪಾಗಲಾರದು.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ.ಆದರೂ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಅವರ ಫ್ಯಾನ್ಸ್‌ಗಳು ಎತ್ತಿ ಮೆರೆಸಿದ್ದಾರೆ.ಹಾಗೆಯೇ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡಾ ಜೋರಾಗಿದೆ ಎನ್ನಬಹುದು.
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದಿರುವ ಸ್ಟಾರ್ ನಟರಲ್ಲಿ ದರ್ಶನ್ ಒಬ್ಬರು.ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.ದರ್ಶನ್ ಜೈಲಿನಲ್ಲಿದ್ರೂ ಅವರ ಸಿನಿಮಾ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ ಎನ್ನುವುದು ನಿಜವಾಯ್ತು.
ಡೆವಿಲ್ ಸಿನಿಮಾ ಬಿಡುಗಡೆಯಾಗಿಒಳ್ಳೇಯ ಕಲೆಕ್ಷನ್ ಮಾಡಿದೆ. ಫಿಲ್ಮ್ ರಿಲೀಸ್ ಆದ ದಿನವೇ 13.8 ಕೋಟಿಯನ್ನು ಗಳಿಸಿತು ಎಂದು ಮಾಹಿತಿಗಳು ತಿಳಿಸಿವೆ. ತಮ್ಮ ನೆಚ್ಚಿನ ನಟ ಜೈಲಿನಲ್ಲಿದ್ರೂ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಿದ್ದು, ಇನ್ನೇನು ದರ್ಶನ್ ಸಿನಿ ಜರ್ನಿ ಮುಗಿದೋಯ್ತು ಎನ್ನುವವರು ಮುಂದೆ ಏನು ಎನ್ನುವ ಮಟ್ಟದಲ್ಲಿದ್ದಾರೆ.
ಕಾಟೇರ ಸಿನಿಮಾ ಕೂಡ ಒಳ್ಳೇಯ ಹೆಸರನ್ನು ತಂದುಕೊಟ್ಟಿರುವ ಸಮಯದಿಂದ ವರ್ಷಕ್ಕೆ 2 ಸಿನಿಮಾಗಳನ್ನು ಮಾಡಬೇಕು ಎಂದು ಅಂದುಕೊಂಡಿದ್ದರು.ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಇದರ ನಡುವೆ ತಮ್ಮ ನೆಚ್ಚಿನ ನಟನ ಆಗಮನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
