ನವದೆಹಲಿ: ಅಭಿಮಾನಿಯ ಮೊಬೈಲ್ ಕಿತ್ತುಕೊಂಡಿರುವ ಘಟನೆ ವಿಮಾನ ನಿಲ್ದಾನದಲ್ಲಿ ನಡೆದಿದೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅಭಿಮಾನಿಯ ಕೈಯಿಂದ ಮೊಬೈಲ್ ಕಿತ್ತುಕೊಳ್ಳುವ ವೀಡಿಯೋ ವೈರಲ್ ಆಗಿದೆ.
ಹೌದು ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ವಿಮಾನ ನಿಲ್ದಾಣದಲ್ಲಿ ಚೆಕ್ ಸರದಿಯಲ್ಲಿ ನಿಂತಿರುವ ವೇಳೆಯಲ್ಲಿ ಅಭಿಮಾನಿಯು ವೀಡಿಯೋವನ್ನು ಚಿತ್ರಿಕರಣ ಮಾಡಿದ್ದಾರೆ.ಮೊದಲು ವೀಡಿಯೋ ಮಾಡಬೇಡ ಎಂದು ಎಚ್ಚರಿಕೆ ನೀಡಿದರೂ ವಿಡಿಯೋ ಮಾಡಲು ಮುಂದಾದ ಅಭಿಮಾನಿಯ ಕೈಯಿಂದ ಮೊಬೈಲನ್ನು ಕಿತ್ತುಕೊಂಡಿದ್ದಾರೆ.
ಬುಮ್ರಾ ಅಭಿಮಾನಿಯಿಂದ ಪೋನ್ ಕಿತ್ತುಕೊಂಡಿರುವ ವೀಡಿಯೋವನ್ನು ನೋಡಿದ ನೆಟ್ಟಿಗರು ಪರ-ವಿರೋದದ ಚರ್ಚೆಗಳನ್ನು ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳಿಗೂ ಅವರಿಷ್ಟ ಬಂದ ಹಾಗೆ ಬದುಕುವ ಹಕ್ಕಿದೆ. ಅವರ ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ಅವರಿಗೆ ಕಿರಿಕಿರಿಯುಂಟು ಮಾಡುವುದು ಎಷ್ಟು ಸರಿ? ನೀವೇ ಆಲೋಚಿಸಿ. ಜಸ್ಪ್ರೀತ್
