ಪಟ್ನಾ:ವಯಸ್ಸಾದ ವಯೋವೃದ್ದರ, ಹಿರಿಯ ನಾಗರೀಕರ ಆರೋಗ್ಯ ಸೇವೆಯನ್ನು ನೀಡುವ ಯೋಜನೆಯನ್ನು ರೂಪಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಹೇಳಿದ್ದಾರೆ.

ಅಗತ್ಯವಿರುವ ಹಿರಿಯ ನಾಗರಿಕರಿಗೆ ಮನೆಯಲ್ಲೇ ಬ್ಲಡ್‌ ಚೆಕಪ್‌, ಇಸಿಜಿ ಮತ್ತು ಇನ್ನಿತರ ಪರೀಕ್ಷೆಗಳನ್ನು ಮತ್ತು ವೈದ್ಯಕೀಯ ನೆರವನ್ನು ಅವರಿಗೆ ಬೇಕಾದ ಸಮಯದಲ್ಲಿ ದೊರಕಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

7 ನಿರ್ಣಯಗಳ ಅಡಿಯಲ್ಲಿ ಹಿರಿಯ ನಾಗರೀಕರ ಆರೋಗ್ಯ ಸೇವೆಯ ಆಧಾರದ ಮೇಲೆ ಜಾರಿ ಮಾಡುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಹಿರಿಯ ನಾಗರೀಕರ ಆರೋಗ್ಯ ಸೌಲಭ್ಯಗಳನ್ನು ಅವರ ಮನೆಗಳಲ್ಲಿ ಸಿಗುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ʼರಾಜ್ಯದಲ್ಲಿ ನಮ್ಮಗೌವರ್ನಮೆಂಟ್ ಅಧಿಕಾರಕ್ಕೆ ಬಂದಾಗಿನಿಂದೆಲ್ಲಾ ವರ್ಗದ ಜನರ ಉನ್ನತಿಗಾಗಿ , ಅಭಿವೃದ್ದಿಗಾಗಿ ನಾವು ಶ್ರಮಿಸಿದ್ದೇವೆ .ನಾವು ಬಿಹಾರವನ್ನು ನಮ್ಮ ಕುಟುಂಬವೆಂದು ಅಂದುಕೊಂಡಿದ್ದೇವೆ ಎಂದು ಹೇಳಿದ್ದಾರೆ.‌

Leave a Reply

Your email address will not be published. Required fields are marked *