ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಕಾರ್ಯಕರ್ತರ ನಡುವೆ ಜಗಳವಾಗಿ ಗನ್ ಫೈರಿಂಗ್ ನಡೆದು ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಯ ಕುರಿತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಪಾರ್ಟಿಯವರು ಕಾರ್ಯಕ್ರಮಗಳ ವೇಳೆ ಬ್ಯಾನರ್ ಕಟ್ಟೇ ಕಟ್ಟುತ್ತಾರೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಇಷ್ಟು ದೊಡ್ಡ ಘಟನೆ ನಡೆದಿರುವುದು ಸರಿಯಲ್ಲ.ಇದನ್ನು ನಾನು ಖಂಡಿಸುತ್ತೇನೆ.
ಕಾನೂನು ಎಲ್ಲರಿಗೂ ಒಂದೇ, ಯಾರೇ ತಪ್ಪು ಮಾಡಿದ್ರೂ ಅದು ತಪ್ಪೇ ಹೋಗಿರುವ ಜೀವ ಮತ್ತೆ ಮರಳಿ ಬಾರದು .ಅದ್ದರಿಂದ ಇದರ ಬಗ್ಗೆ ತನಿಖೆ ನಡೆದು ಕಾರಣಕರ್ತರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
