ಬಿಗ್‌ಬಾಸ್ ಸೀಜನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ತನ್ನನ್ನು ಗೆಲ್ಲಿಸಿರುವ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ನನ್ನನ್ನು ನೀವು ಮನೆಮಗಳಿಗೆ ತೋರುವ ಪ್ರೀತಿಯನ್ನು ತೋರಿಸಿದ್ದೀರಾ ಇದಕ್ಕಿಂತ ಭಾಗ್ಯ ನನಗೆ ಇನ್ನೇನು ಬೇಕು ಎಂದು ಸಂತೋಷ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ಶೇರ್ ಮಾಡುವುದರ ಮೂಲಕ ಧನ್ಯವಾದ ತಿಳಿಸಿದ್ದಾರೆ. ನಾನು ಗೆಲ್ಲಲು ನಿಮ್ಮೆಲ್ಲರ ಪ್ರೀತಿ ಕಾರಣ ನೀವು ನನಗೆ ತೋರಿದ ಪ್ರೀತಿಯಿಂದ ಮನಸ್ಸು ತುಂಬಿದೆ. ನನಗೆ ಪ್ರೀತಿಯನ್ನು ಕೊಟ್ಟಿದ್ದೀರಾ ಇದಕ್ಕಿಂತ ಬೇರೆನೂ ಬೇಡ ಎಂದು ಹೇಳಿದ್ದಾರೆ.
