ʼದೇಶದಲ್ಲಿ ರಾಮ ರಾಜ್ಯ ಎಂದು ಕಥೆ ಕಟ್ಟುತ್ತಿದ್ದಾರೆ. ರಾಮರಾಜ್ಯ ಎಂದು ಹೆಸರು ಬರುವುದಕ್ಕೆ ರಾಮ ಕಾರಣನಲ್ಲ, ಬದಲಾಗಿ ಮಾಹಾತ್ಮ ಗಾಂಧಿ ಕಾರಣ. ಈ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾದರೆ ವಾಲ್ಮೀಕಿ ರಾಮಾಯಣದ ಉತ್ತರಖಾಂಡ ಓದಿದರೇ ಎಲ್ಲವೂ ತಿಳಿಯುತ್ತದೆʼ ಎಂದು ಚಿಂತಕ ಪ್ರೊ. ಕೆ.ಎಸ್.ಭಗವಾನ್‌ ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಗವಾನ್ ಅವರು, ‌ʻವಾಲ್ಮೀಕಿ ರಾಮಾಯಣದ ಉತ್ತರ ಕಾಂಡದಲ್ಲಿ ರಾಮನ ಬಗ್ಗೆ ಓದಿದರೇ ಅವನ ನಿಜರೂಪ ಬಟಾ ಬಯಲಾಗುತ್ತದೆ. ಪುರೋಹಿತರ ಜೊತೆಗೆ ಕುಳಿತು, ಆ ಕತೆ, ಈ ಕತೆಯನ್ನು ರಾಮ ಹೇಳುತ್ತಿದ್ದ.. ಇನ್ನೂ ರಾಮ ಮಧ್ಯಾಹ್ನವಾದರೇ ಸಾಕು ಸೀತೆಯನ್ನು ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ, ಅವನಷ್ಟೇ ಅಲ್ಲದೇ ಸೀತೆಗೂ ಹೆಂಡ ಕುಡಿಸುತ್ತಿದ್ದ! ಈ ನಿಜ ತಿಳಿಯಬೇಕಾದ್ರೇ ನೀವು ವಾಲ್ಮೀಕಿ ರಾಮಾಯಣದ ಉತ್ತರ ಕಾಂಡ ಪುಸ್ತಕವನ್ನ ಓದಿ, ಇದರ ಬಗ್ಗೆ ದಾಖಲೆಯಿದೆʼ ಎಂದಿದ್ದಾರೆ. ರಾಮ ರಾಜ್ಯಭಾರ ಮಾಡಿದ್ದು 11 ವರ್ಷ. ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸಿದ್ದು ಇದರಲ್ಲಿಯೂ ಉಲ್ಲೇಖವಾಗಿದೆ. ಸೀತೆ ತನ್ನ ಅಭಿಪ್ರಾಯಗಳನ್ನು ತಿಳಿಸೋದಕ್ಕೆ ರಾಮ ಬಿಡುತ್ತಿರಲಿಲ್ಲ. ಲಕ್ಷ್ಮಣನನ್ನು ಗಡಿಪಾರು ಮಾಡಿದ ಎಂದೂ ಹೇಳಿದರು.

Leave a Reply

Your email address will not be published. Required fields are marked *