ಬಿಗ್‌ಬಾಸ್-12‌ ಪ್ರಾರಂಭವಾಗಿ ಇನ್ನೂ 2 ದಿನ ಆಗಿರುವುದು. ಅಷ್ಟರಲ್ಲಾಗಲೇ ಸ್ಪರ್ಧಿಗಳ ನಡುವೆ ಕಿಚ್ಚು ಹೊತ್ತಿಕೊಂಡಿದ್ದು, ಸ್ಪರ್ಧಿಗಳ ನಡುವಲ್ಲಿಯೇ ಭಿನ್ನಾಭಿಪ್ರಾಯಗಳು ಮೂಡಿ ಜಗಳಗಳು ಶುರುವಾಗಿವೆ ಎನ್ನಲಾಗಿದೆ.

ಬಿಗ್‌ಬಾಸ್ ನೋಡಲು ಜನ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿರುತ್ತಾರೆ. ಈ ಶೋ ಶುವಾದರೆ ಸಾಕು ಎಲ್ಲಾ ಮನರಂಜನಾ ಕಾರ್ಯಕ್ರಮಗಳ ಟಿಆರ್‌ಪಿಯನ್ನು ಈ ಶೋ ಹಿಂದಿಕ್ಕುತ್ತದೆ.

ದೊಡ್ಮನೆಯಲ್ಲಿ ಈ ಬಾರಿ ಕಾವ್ಯ ಹಾಗೂ ಗಿಲಗಲಿ ನಟ ಜಂಟಿಯಾಗಿ ಆಟವಾಡುತ್ತಿದ್ದರೆ, ಅಶ್ವಿನಿಗೌಡ ಏಕಾಂಗಿಯಾಗಿ ಆಟವಾಡುತ್ತಿದ್ದಾರೆ. ಇದು ಬಿಗ್‌ಬಾಸ್ ನೀಡಿರುವ ಚಟುವಟಿಕೆಯ ಕಾನ್ಸೆಪ್ಟ್‌ ಇದಾಗಿದೆ. ಒಂಟಿಯಾಗಿರುವ ಸ್ಪರ್ಧಿಗಳು ಅಧಿಕಾರಿಗಳಾಗಿದ್ದರೆ, ಜಂಟಿಯಾದವರು ಅವರ ಸೇವಕರಾಗಿರುತ್ತಾರೆ.

ಲಿವಿಂಗ್‌ ರೂಂ ನಲ್ಲಿ ಕುಳಿತು ಮಾತನಾಡುವ ವೇಳೆಯೂ ಮಾತಿನ ಚಕಮಕಿ ನಡೆದು ಅಶ್ವಿನಿ ಗೌಡ ಗಿಲ್ಲಿನಟನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ನಟಿ ಅಶ್ವಿನಿಗೌಡ ಮತ್ತು ಗಿಲ್ಲಿ ನಟನ ನಡುವೆ ಮಾತಿನ ಚಕಮಕಿ ನಡೆದು ಜಗಳ ವಿಕೋಪಕ್ಕೆ ಹೋಗುವ ಹಂತ ತಲುಪಿದೆ. ಹೀಗೆ ಸ್ಪರ್ದಿ ಪ್ರತಿಸ್ಪರ್ಧಿಗಳ ನಡುವೆ ಕಿಡಿ ಹೊತ್ತಿಕೊಂಡಿದ್ದು, ಇದು ಹೆಚ್ಚಾಗುತ್ತದೊ ಇಲ್ಲವೇ ತಣ್ಣಗಾಗುತ್ತ ಎನ್ನುವುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *