ಖ್ಯಾತ ಮೇವಾಟಿ ನೃತ್ಯಗಾರ್ತಿ ಅಸ್ಮೀನಾ ಅವರಿಗೆ ಕಿರುಕುಳ ನೀಡಿದ ಘಟನೆಯು ಹರಿಯಾಣದ ನುಹ್ ಜಿಲ್ಲೆಯ ಪಲ್ಲಾ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಮದುವೆ ಸಮಾರಂಭದಲ್ಲಿ ಇಂಡಿಯನ್ ಐಡಲ್ ಸೀಸನ್ 10ರ ವಿಜೇತ ಸಲ್ಮಾನ್ ಅಲಿಯವರ ಗಾಯನ ಮತ್ತು ಅಸ್ಮೀನಾರವರ ನೃತ್ಯವನ್ನು ಆಯೋಜಿಸಲಾಗಿತ್ತು. ನೃತ್ಯ ಮಾಡಬೇಕಾದರೆ ಕಿಡಿಗೇಡಿಗಳ ವರ್ತನೆಯಿಂದ ವೇದಿಕೆಯು ರಣರಂಗವಾಗಿತ್ತು.
ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಜನಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದರು. ನೃತ್ಯ ನಡೆಯುತ್ತಿರುವ ವೇಳೆ ವೇದಿಕೆ ಹತ್ತಿದ ಕಿಡಿಗೇಡಿಯೊಬ್ಬ ಅಸ್ಮೀನಾ ಮತ್ತು ಇತರ ಮಹಿಳೆಯರಿಗೆ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ವರ್ತನೆಯನ್ನು ನೃತ್ಯಗಾರರು ವಿರೋಧಿಸಿದಾಗ ಭದ್ರತಾ ಸಿಬ್ಬಂದಿಗಳು ಮತ್ತು ನೆರೆದಿದ್ದ ಜನರು ಆರೋಪಿಯನ್ನು ವೇದಿಕೆಯ ಮೇಲೆಯೇ ಥಳಿಸಿದ್ದಾರೆ.
ಆರೋಪಿಯನ್ನು ತಳಿಸುತ್ತಿರುವ ವೇಳೆ ಗೊಂದಲವುಂಟಾಗಿ ಕಾಲ್ತುಳಿತ ಉಂಟಾಯಿತು.ಇದರಿಂದ ಆತಂಕಗೊಂಡು ಭಯಭೀತರಾದ ಅಸ್ಮೀನಾ ತಮ್ಮ ರಕ್ಷಣೆಗಾಗಿ ಎತ್ತರದ ಗೋಡೆಯನ್ನು ಹಾರಿದ್ದಾರೆ. ಈ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ.
