ನಿಜ ಜೀವನದಲ್ಲಿ ನೀವು ಮಾಡಬಹುದಾದ ಕಾರ್ಯಗಳನ್ನು ಗೇಮ್‌ ಮೂಲಕ ಮಾಡುತ್ತಾ, ಎಂಜಾಯ್‌ ಮಾಡುವುದು ಎಷ್ಟು ರೋಮಾಂಚನ ಕೊಡುತ್ತದೆ ಅಲ್ಲವ? ಸಿನಿಮೀಯ ರೀತಿಯಲ್ಲಿ ಹೈ ಕ್ಲಾಸ್ ಕಾರು ಓಡಿಸುತ್ತಾ ಚೇಸಿಂಗ್‌ ಮಾಡುವುದು, ರೌಡಿಗಳೊಡನೆ, ಕಾದಾಡುವುದು ಮುಂತಾದವುಗಳಿಗೆ ಹೇಳಿಮಾಡಿಸಿದ ಗೇಮ್‌ ಅಂದರೆ ಜಿಟಿಎ.

ಜಿಟಿಎ ಅಂದರೆ ಗ್ರ್ಯಾಂಡ್‌ ತೆಫ್ಟ್‌ ಆಟೋ ಅಂತ. ಈ ಗೇಮನ್ನು ಕಂಡುಹಿಡಿದವರು ಡೇವಿಡ್‌ ಜೋನ್ಸ್ ಮತ್ತು ಮೈಕ್‌ ಡೈಲ್ಲಿ. ಈ ಗೇಮ್‌ ತುಂಬಾ ಅದ್ಭುತವಾಗಿದೆ. ಏಕೆಂದರೆ ಈ ಗೇಮ್‌ನಲ್ಲಿ ನಾವು ನಿಜ ಜೀವನದಲ್ಲಿ ಇರುವ ಹಾಗೆ ಇರಬಹುದು. ಹೇಗೆಂದರೆ, ಈ ಗೇಮಿನಲ್ಲಿ ನಮ್ಮದೇ ಆದ ಮನೆ, ಕಾರು, ಕುಟುಂಬದವರು ಇರುತ್ತಾರೆ.
ಇದರಲ್ಲಿ ನಿಮಗೆ ಬೇಕಾದ ಕಾರು, ಬೈಕು, ಏರೋಪ್ಲೇನ್‌, ಇನ್ನೂ ಮುಂತಾದ ವಾಹನಗಳನ್ನು ಖರೀದಿ ಮಾಡಿ ಓಡಿಸಬಹುದು. ಈ ಗೇಮ್‌ ಕೇವಲ ₹1489.00 ರೂಪಾಯಿಗಳು ಮಾತ್ರ. ಉಚಿತವಾಗಿ ಡೌನ್ಲೋಡ್‌ ಕೂಡಾ ಮಾಡಿಕೊಳ್ಳಬಹುದು. ಆದರೆ, ಅದರಲ್ಲಿ ಅಡ್ವಾನ್ಸ್‌ ಮೋಡ್‌ಗಳು ಸಿಗವುದಿಲ್ಲ. ಈ ಗೇಮ್‌ನಲ್ಲಿ ನಿಮಗೆ ಬೇಕಾದ ನಾಯಿಗಳನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಒಂದು ಫೋನ್ ಕೂಡಾ ಇರುತ್ತದೆ. ಆಪಲ್ ಐಫೋನ್‌ನ ನಕಲು ಎನ್ನಬಹುದು. ಆದರೆ ಆ ಫೋನ್‌ನ ಹೆಸರು ಈಫ್ರೂಟ್‌. ಈ ಫೋನನ್ನು 4s ಮಾದರಿಯಾಗಿದೆ.
ಈ ಗೇಮಿನಲ್ಲಿ ನಮಗೆ ಇಷ್ಟ ಬಂದ ಕೆಲಸ ಮಾಡಬಹುದು. ಉದಾ: ಟ್ಯಾಕ್ಸಿ ಓಡಿಸುವುದು. ಅಗ್ನಿಶಾಮಕ ಕೆಲಸ ಮಾಡುವುದು, ಅಂಗಡಿ ಇಡುವುದು, ಕಾರ್‌ ಶೋ ರೂಂ ಮುಂತಾದವುಗಳು. ಇದರಲ್ಲಿ ಮುಖ್ಯವಾದ ಮೂರು ಪಾತ್ರಧಾರಿಗಳು ಇರುತ್ತಾರೆ. ಮೈಕಲ್‌, ಫ್ರಾಂಕ್ಲಿನ್‌, ಟ್ರೆವೋರ್‌. ಈ ಮೂರು ಪಾತ್ರದಲ್ಲಿ ನೀವು ಯಾರಾನ್ನಾದರೂ ಆಯ್ಕೆ ಮಾಡಬಹುದು.
ಈ ಗೇಮಿನಲ್ಲಿ ಬೇಕಾದರೆ ಗನ್‌ಗಳನ್ನು ಕೂಡಾ ತೆಗೆದುಕೊಳ್ಳಬಹುದು. ನಿಮಗೆ ಬೇಕಾದ ಬಟ್ಟೆ, ಶೂ, ಕನ್ನಡಕ, ಮತ್ತು ಇನ್ನೂ ಮುಂತಾದ ವಸ್ತುಗಳನ್ನು ಖರೀದಿ ಮಾಡಬಹುದು. ಈ ಗೇಮನ್ನು ದೊಡ್ಡ ದೊಡ್ಡ ಯೂಟ್ಯೂಬರ್‌ ಆದ @Techno Gamerz ಅವರು ಆಡುತ್ತಾರೆ. ಇವರು #150 ಎಪಿಸೋಡ್‌ಗಳನ್ನು ಮಾಡಿದ್ದಾರೆ. ಇವರು ಯಾವಾಗ ಜಿಟಿಎ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹಾಕಿದಾಗ ಮಿಲಿಯನ್‌ಗಟ್ಟಲೇ ವಿಕ್ಷಣೆಗಳು ಬರುತ್ತವೆ ಹಾಗೂ ಆ ವಿಡಿಯೋಗಳು #1 ಟ್ರೆಂಡಿಂಗ್‌ನಲ್ಲಿ ಇರುತ್ತವೆ.

ಈ ಗೇಮಿನ ಅನೇಕ versionsಗಳು ಇದೆ. gta, gta2, gta3, gta vice city, gta san andreas, gta5. ಅಲ್ಲದೆ, ಮುಂದೆ gta6 ಕೂಡಾ ಬರುತ್ತಿದೆ. ಇದನ್ನು phone, pc, consoleನಲ್ಲಿ ಕೂಡ ಆಡಬಹುದು. ಈ ಗೇಮಿಗೆ IMBd 9.5/10 ರೇಟಿಂಗ್‌ ನೀಡಿದೆ.
ನಿಮಗೆ missions ಮಾಡಲು ಇಷ್ಟ ಎಂದರೆ ನೀವು ಬಹಳಷ್ಟು ಮೋಡ್ಸ್‌ ಹಾಕಿ ಆಡಬಹುದು. ಮೋಡ್ಸೆಂದರೆ ಉದಾ: ಈ ಗೇಮಿನಲ್ಲಿ ಒಂದು ಗಾಡಿ ಇದೆ. ಆದರೆ ಅದಕ್ಕೆ ಬಣ್ಣ ಹಾಕಲು ಅಂಗಡಿಗಳಿಗೆ ಹೋಗಬೇಕಾಗುತ್ತದೆ. ಆದರೆ ಮೋಡ್ಸ್‌ ಹಾಕಿಕೊಂಡರೆ ಅಂಗಡಿಗೆ ಹೋಗಬೇಕಾಗಿ ಅಗತ್ಯ ಇರುವುದಿಲ್ಲ. ಈ ಗೇಮಲ್ಲಿ ನೀವು ಬ್ಯಾಂಕುಗಳನ್ನು ಲೂಟಿ ಮಾಡಬಹುದು. ಆದರೆ ಪೊಲೀಸ್‌ ನಿಮ್ಮ ಹಿಂದೆ ಬರುತ್ತಾರೆ ಆಗ ನೀವು ತಪ್ಪಿಸಿಕೊಳ್ಳಬೇಕು. ಅದರಲ್ಲೂ 5 ಸ್ಟಾರ್‌ ಬಂದಾಗ ನೀವು ತಪ್ಪಿಸಿಕೊಳ್ಳಲು ಆಗುವುದಿಲ್ಲ.


ಆದರೂ ನೀವು ತಪ್ಪಿಸಿಕೊಂಡು ತೋರಿಸಿದರೆ, youtubeನಲ್ಲಿ ಹೆಚ್ಚುವಿಕ್ಷಣೆಗಳು ಬರುತ್ತವೆ. ಹಾಗೂ ಹೆಚ್ಚು subscribersಗಳು ಕೂಡಾ ಪಡೆಯಬಹುದು. ಆದರೆ ನೀವು ಮ್ಯಾಪ್‌ ಬಿಟ್ಟು ಹೋದರೆ ನೀರಿನಲ್ಲಿ ಒಂದು ಶಾರ್ಕ್‌ ನಿಮ್ಮನ್ನು ದಾಳಿ ಮಾಡುತ್ತದೆ. ಇನ್ನೂ ಹಲವಾರು ವಸ್ತುಗಳು, ಪ್ರಾಣಿಗಳು, ಮನುಷ್ಯರು ಮತ್ತು ಹಲವಾರು ಜಾಗಗಳಿಗೆ ಹೋಗಿ ಈ ಗೇಮನ್ನು ಎಂಜಾಯ್‌ ಮಾಡಬಹುದು. ಅಂದಹಾಗೆ ಇದರಲ್ಲಿ ಭಾರತದ ವರ್ಶನ್‌ ಕೂಡಾ ಲಭ್ಯವಿದೆ.

-ಚೆಗುವಾರ

One thought on “‌ನಿಮ್ಮ ಲೈಫ್‌ ಮಿರರ್ ಮಾಡುವ ಗೇಮ್‌ ಇದು!”

Leave a Reply

Your email address will not be published. Required fields are marked *