ಕಲಬುರ್ಗಿ: ರಾಜ್ಯ ರಾಜಕೀಯದಲ್ಲಿಕುರ್ಚಿ ಕದನವು ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೆ ಉರಿಯುತ್ತಲೇಯಿದೆ.ಕುರ್ಚಿ ವಿಚಾರದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ತೀವ್ರ ಸ್ವರೂಪ ಪಡೆದುಕೊಳ್ಳುವ ನಡುವೆ ಸಿಎಂ ಯಾರಾಗ್ತಾರೆ ಎಂಬ ಗೊಂದಲವನ್ನು ಹೈಕಮಾಂಡ್ ಹುಟ್ಟುಹಾಕಿಲ್ಲ.ಬದಲಾಗಿ ಸ್ಥಳೀಯವಾಗಿ ಸೃಷ್ಟಿಯಾಗುತ್ತದೆʼ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ಪಷ್ಟನೆ ನೀಡಿದ್ದಾರೆ.
ಕುರ್ಚಿ ವಿಚಾರವೂ ಸ್ಥಳೀಯವಾಗಿ ಹುಟ್ಟುಹಾಕಿರುವ ವಿಷಯವಾದ್ದರಿಂದ ಈ ಗೊಂದಲಗಳಿಗೆಲ್ಲಾ ಸ್ಥಳೀಯ ನಾಯಕರೇ ಪರಿಹಾರವನ್ನು ಕಂಡುಕೊಳ್ಳಬೇಕು. ಅದನ್ನು ಬಿಟ್ಟು ನಡೆಯೋ ಅನಿಷ್ಟಕ್ಕೆಲ್ಲಾ ಶನೇಶ್ವರ ಕಾರಣ ಅಂದಹಾಗೆ ಎಲ್ಲದಕ್ಕೂ ಹೈಕಮಾಂಡ್ ಕಡೆ ಬೆಟ್ಟು ಮಾಡು ತೋರಿಸುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಕುರ್ಚಿ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಸೂಕ್ತ ಸಮಯದಲ್ಲಿ ಕರೆಸಿ ಚರ್ಚಿಸುವುದಾಗಿ ಹೈಕಮಾಂಡ್ ಹೇಳಿದ್ದು, ಈ ಗೊಂದಲವನ್ನು ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಕಾರ್ಯಕರ್ತರೆಲ್ಲರೂ ಕೂಡಿ ಕಟ್ಟಿದ ಪಕ್ಷ. ಪಕ್ಷದ ಕಾರ್ಯಗಳು ನಾನು ಮಾಡಿದ್ದು, ನಾನು ಮಾಡಿದ್ದು, ಎಂದು ಹೇಳುವುದನ್ನು ಮೊದಲು ಬಿಡಬೇಕು. ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
