ಬೆಳಗಾವಿ: ಗೃಹಸಚಿವ ಡಾ.ಜಿ.ಪರಮೇಶ್ವರ್‌ ದ್ವೇಷ ಭಾಷಣ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು.ವಿರೋಧ ಪಕ್ಷಗಳ ವಿರೋಧದ ನಡುವೆಯೂ ಇಂದು ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜಕೀಯದಲ್ಲಾಗಲೀ, ಎಲ್ಲೇ ಆದರೂ, ದ್ವೇಷ ಭಾಷಣವನ್ನು ಮಾಡುವಂತಿಲ್ಲ. ಈ ಕಾನೂನನ್ನು ಉಲ್ಲಂಘಿಸಿದರೆ 1 ಲಕ್ಷ ರೂ ದಂಡ ಮತ್ತು 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡುವ ಅವಕಾಶವಿರುತ್ತದೆ. ಈ ಮಸೂದೆಯನ್ನು ಡಿ.4ರಂದು ರಾಜ್ಯ ಸಚಿವ ಸಂಪುಟದಲ್ಲಿ ಅಂಗೀಕರಿಸಲಾಗಿತ್ತು.

ಈ ಮಸೂದೆಯು ಅಂಗೀಕಾರವಾಗುತ್ತಿದ್ದಂತೆ ಬಿಜೆಪಿ ಶಾಸಕ ಚನ್ನಬಸಪ್ಪ ಮತ್ತು ಭೈರತಿ ಸುರೇಶ್‌  ನಡುವೆ ಏಕವಚನದಲ್ಲಿಯೇ ವಾಕ್ಸಮರ ಪ್ರಾರಂಭವಾಯಿತು.ಭೈರತಿ ಸುರೇಶ್‌ರವರ ದ್ವೇಷ ಭಾಷಣದಿಂದ ಕರಾವಳಿ ಕರ್ನಾಟಕ ಹೊತ್ತಿ ಉರಿಯುತ್ತಿದೆ. ಅಲ್ಲಿ ಬೇಂಕಿ ಹತ್ತಿಸಿ, ಇಲ್ಲಿಯೂ ಹಚ್ಚಲಿದ್ದೀರಿ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆಯನ್ನು ನಡೆಸಿ ಕ್ಷಮೆಯನ್ನು ಯಾಚಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ದ್ವೇಷ-ಭಾಷಣ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಆರ್. ಅಶೋಕ್‌ ಬಿಲ್‌ ಪ್ರತಿಯನ್ನು ಹರಿದುಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಈ ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಮುಂದೂಡಿದ್ದಾರೆ.

Leave a Reply

Your email address will not be published. Required fields are marked *