ವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ, ಮನೋರಂಜನೆ ನೆನಪಾಗುತ್ತದೆ. ವಿದ್ಯಾರ್ಥಿಗಳೆಂದರೆ ಕೇವಲ ಓದು-ಬರಹ ಮಾಡಿಕೊಂಡಿರುವುದು ಮಾತ್ರವಲ್ಲ.ದೈಹಿಕವಾಗಿ ದಂಡನೆ ಮಾಡಬೇಕು. ಕ್ರಿಡೆಗಳಲ್ಲಿ ಭಾಗವಹಿಸಿ ಕ್ರಿಯಾಶೀಲತೆಯಿಂದಿರಬೇಕು. ಕ್ರಿಡೆಗಳನ್ನು ಆಡಿದರೆ, ಭಾಗವಹಿಸಿದರೆ ಏಕಾಗ್ರತೆ ಇರುವುದಿಲ್ಲವೆನ್ನುವುದು ತಪ್ಪು ಕಲ್ಪನೆ. ಪಾಠದ ಜೊತೆಗೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ. ಬುದ್ಧಿ ಶಕ್ತಿಗೆ ಬಹಳ ಪ್ರಾಮುಖ್ಯತೆಯಿದೆ ಹಾಗಾಗಿ ಇದರ ಅಭಿವೃದ್ದಿಗಾಗಿ ಒಂದು ಸುವ್ಯವಸ್ಥಿತ ಶಿಕ್ಷಣವೆಂಬ ವ್ಯವಸ್ಥೆ ಕೆಲವು ಸರ್ಕಾರಿ ಅಥವಾ ಖಾಸಗಿ ಕಂಪೆನಿಗಳಲ್ಲಿರುತ್ತದೆ.

ದೈಹಿಕ ಶಿಕ್ಷಣವು ಕೇವಲ ಭೌದ್ದಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ , ಸಂಗೀತ, ನೃತ್ಯ, ಚಿತ್ರಕಲೆ ನಾಟಕ ಬಹಳ ಮುಖ್ಯವಾಗಿದೆ. ಇವು ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಜೀವ ವಿಜ್ಞಾನದ ಪರಿಕಲ್ಪನೆಯ ಪಂಚ ವಲಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ದೈಹಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ.

ಶಾಲೆಯಿದ್ದರೆ ಅಲ್ಲೊಂದು ಕ್ರೀಡಾಂಗಣ ಮತ್ತು ಕ್ರೀಡಾ ಶಿಕ್ಷಕರು ಇರುತ್ತಾರೆ.ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿಯಾಗಿದ್ದರೆ ದೈಹಿಕ ಶಿಕ್ಷಣ ಭೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕೆಗೆ ಕಲಿಕಾ ಪ್ರಗತಿಗೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ.
ಶಿಕ್ಷಣ ಮತ್ತು ಕ್ರೀಡೆಯ ಪ್ರಮುಖ ಉದ್ದೇಶ ಮತ್ತು ಕ್ರೀಡಾ ಪ್ರಮುಖ ಉದ್ದೇಶ ಮತ್ತು ನಾಗರೀಕರನ್ನು ಕೊಡುವುದಾಗಿದೆ ಮತ್ತು ಚಟುವಟಿಕೆಯಲ್ಲಿ ಒಂದಕ್ಕೊಂದು ಸಾಮ್ಯತೆ ಇದ್ದರೂ ಸಹ ವ್ಯತ್ಯಾಸಗಳು ಕಂಡುಬರುತ್ತವೆ..

ರಾಜರ ಕಾಲದಿಂದಲೂ ಬಂದಿರುವ ಮಲ್ಲಯುದ್ಧ, ಭೃಷ್ಟಿ ಯುದ್ಧ, ಜಲಯುದ್ದ, ಹೀಗೆ ಕೆಲವು ಕ್ರೀಡಾ ಕೂಟಗಳಲ್ಲಿ ಈಗಲೂ ಆಡುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳ ಹೆಸರುಗಳನ್ನು ಬದಲಿಸಿ ಬೇರೆ ಬೇರೆ ಹೆಸರುಗಳನ್ನಿಟ್ಟು ಆಡುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳೀಗೆ ಇಷ್ಟವಿಲ್ಲದಿದ್ದರೂ ಕೂಡಾ ತಂದೆತಾಯಿಗಳು ಅವರನ್ನು ಎಷ್ಟೇ ತಡವಾದರೂ ಪರ್ವಾಗಿಲ್ಲವೆಂದು ಆಟಕ್ಕೆ ಸೇರಿಸುತ್ತಾರೆ. ಆದ್ರೆ ಮತ್ತೆ ಕೆಲವರು ಕೆಲವು ಮನೆಗಳಲ್ಲಿ ಮಕ್ಕಳಿಗೆ ಆಡಲು ಮನಸಿದ್ದರೂ ಪೋಷಕರು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕಾರಣಗಳಿಂದ ಮಕ್ಕಳು ಆಟಗಳಿಂದ ಹಿಂದೆ ಸರಿಯುತ್ತಾರೆ. ಅವರ ಆಡುವ ಕನಸು ನುಚ್ಚುನೂರಾಗಿ, ಅವರ ಆಡುವ ಕಲೆ ಆರಿಹೋಗುತ್ತಿರುವ ದೀಪದಂತೆ ನಂದುಹೋಗುತ್ತದೆ.

ಮಕ್ಕಳ ಪೋಷಕರು ಮಕ್ಕಳಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಮನಗೊಂಡು ಅವರ ಆಸೆಯ ಗಿಡಕ್ಕೆ ನೀರು ಎರೆದರೆ ಹೆಚ್ಚು ಎತ್ತರಕ್ಕೆ ಮರ ಬೆಳೆದು ಆಶ್ರಯ ನೀಡುತ್ತದೆ. ಆದ್ದರಿಂದ ಪೋಷಕರು ಆದಷ್ಟು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು.
-ಪ್ರಿಯದರ್ಶಿನಿ , ವೆಂಕಟಾಲ
