ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್‌ ನಡುವೆ ಸಿಎಂ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿರುವುದು ಗೊತ್ತಿರುವ ಸಂಗತಿಯೇ ಸರಿ. ಆದರೆ ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಪಕ್ಷದ ಶ್ರೀರಾಮುಲು ಸಿಎಂ ಮತ್ತು ಡಿಕೆಶಿ ಕುರ್ಚಿ ಫೈಟ್‌ ನೋಡಿದರೆ ರಷ್ಯಾ ಉಕ್ರೇನ್‌ ಯುದ್ದ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, ಸಿಎಂ ಮತ್ತು ಡಿಕೆಶಿ ನಡುವೆ ಕುರ್ಚಿ ಕದನ ನಡೆಯುತ್ತಿದ್ದರೂ ಇಬ್ಬರೂ ಬ್ರೇಕ್‌ಪಾಸ್ಟ್‌ ಮೀಟಿಂಗ್‌ ಮಾಡಿ ಯುದ್ದಕ್ಕೆ ಬ್ರೇಕನ್ನು ನೀಡಿದ್ದಾರೆ. ಮತ್ತೆ ಯಾವಾಗ ಪ್ರಾರಂಭವಾಗುತ್ತದೋ ನೋಡಬೇಕು. ಏಕೆಂದರೆ ರಷ್ಯಾ ಉಕ್ರೇನ್‌ ಯುದ್ದದ ನಡುವೆ ಬ್ರೇಕ್‌ ನೀಡ್ತಾರೆ.ಮತ್ತೆ ಯಾರ ಮೇಲೆ ಯಾರು ಯಾವಾಗ ಬಾಂಬ್‌ ಸಿಡಿಸುತ್ತಾರೆ ಎಂಬುದು ತಿಳಿದಿಲ್ಲ.ಹಾಗೆಯೇ ಡಿಕೆಶಿ ಮತ್ತು ಸಿಎಂ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ಸೂಚನೆಯಂತೆ ನಡೆಯುತ್ತೇನೆ ಎಂದು ಒಂದೆಡೆ ಹೇಳಿಕೆಯನ್ನು ನೀಡಿದರೆ ಮತ್ತೊಂದೆಡೆ ಡಿಕೆಶಿ ನನ್ನ ಮತ್ತು ಸಿಎಂ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲವೆಂದು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *