ಬಿಗ್‌ಬಾಸ್ ಮನೆಯ ಬೀಗ ತೆಗೆಯೋ ವಿಚಾರದಲ್ಲಿ ಒಂದು ಸಲ ನೋಟಿಸ್ ಕೊಟ್ಟ ಮೇಲೆ ಅದು ಇತ್ಯರ್ಥವಾಗುವವರೆಗೂ ಬೀಗ ತೆಗೆಯುವ ಹಾಗಿಲ್ಲವೆಂದು ಸಚಿವ ರಾಮಲಿಂಗಾರೆಡ್ಡಿ ಬಿಗ್‌ಬಾಸ್ ವಿಚಾರದಲ್ಲಿ ಡಿಸಿಎಂ ಡಿಕೆಶಿ ನಡೆಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್ ಸ್ಥಗಿತಗೊಳಿಸಿ ಮತ್ತೆ ಚಾಲು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ನಾನು ಈ ವಿಚಾರವನ್ನು ಮಾಧ್ಯಮದ ಮೂಲಕ ನೋಡಿದೆ. ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷರಾಗಿರುವ ನರೇಂದ್ರಸ್ವಾಮಿಯವರು ಬಿಗ್‌ಬಾಸ್ ರೂಲ್ಸ್‌ನ್ನು ಬ್ರೇಕ್ ಮಾಡಿದ್ದಾರೆ ಎಂದು ನೋಟಿಸ್ ನೀಡಿದ್ದರು.ಆ ನೋಟಿಸ್ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದಕ್ಕೆ ಬಿಗ್‌ಬಾಸ್ ಮನೆಗೆ ಬೀಗ ಹಾಕಿದ್ದರು. ಆದರೀಗ ಡಿಕೆಶಿವಕುಮಾರ್ ಅನುಮತಿ ನೀಡಿ ಹೇಳಿಕೆ ನೀಡಿರುವುದನ್ನು ಮಾಧ್ಯಮದಲ್ಲಿಯೇ ನೋಡಿದೆ. ಈ ವಿಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.
ಒಂದು ಸಲ ನೋಟಿಸ್ ಕೊಡ್ಡ ಮೇಲೆ ಅದು ಇತ್ಯರ್ಥವಾಗುವವರೆಗೂ ಬೀಗ ತೆಗೆಯುವ ಹಾಗಿಲ್ಲವೆಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
